Site icon Ullalavani

ದೇರಳಕಟ್ಟೆ: “ಗಣಕ ಯಂತ್ರ ಆಧಾರಿತ ಔಷಧ ವಿನ್ಯಾಸ ಹಾಗೂ ಸಂಶೋಧನೆ’ ಕಾರ್ಯಗಾರ

UN NETWORKS

ದೇರಳಕಟ್ಟೆ: ಗಣಕ ಯಂತ್ರ ಆಧಾರಿತವಾಗಿ ವಿನ್ಯಾಸ ಮಾಡುವುದರಿಂದ ನೂತನ ಔಷಧ ಸಂಶೋಧನೆಯ ವಿಷಯಗಳನ್ನು ಅತ್ಯಂತ ತ್ವರಿತವಾಗಿ ಮಾಡಲು ಸಾಧ್ಯ.

ಹಾಗೆಯೇ ಅತಿ ಕಡಿಮೆ ಖರ್ಚು ಹಾಗೂ ಅಲ್ಪ ಸಮಯದಲ್ಲಿ ಔಷಧ ಉತ್ಪಾದನೆ ಸಾಧ್ಯ ಎಂದು ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎಂ. ಶಾಂತಾರಾಂ ಶೆಟ್ಟಿ,ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಅಧೀನದ ಪಾನೀರ್ ಕ್ಯಾಂಪಸ್ ನಲ್ಲಿರುವ ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಔಷಧೀಯ ಮಹಾ ವಿದ್ಯಾಲಯದ ಔಷಧೀಯ ರಸಾಯನ ಶಾಸ್ತ್ರ ವಿಭಾಗದ ವತಿಯಿಂದ ಶ್ರೋಡಿಂಜರ್ ಕಂಪೆನಿಯ ಸಹಭಾಗಿತ್ವದಲ್ಲಿ “ಗಣಕ ಯಂತ್ರ ಆಧಾರಿತ ಔಷಧ ವಿನ್ಯಾಸ ಹಾಗೂ ಸಂಶೋಧನೆ’ ಯ ಬಗ್ಗೆ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಎಸ್. ಶಾಸ್ತ್ರಿ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥ ಡಾ. ಈಶ್ವರ್ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಜೇನಿ ಪಿ. ಜೇಮ್ಸ್ ವಂದಿಸಿದರು.

Exit mobile version