UN NETWORKS
ಕಿನ್ಯಾ : ಸುವರ್ಣ ಮಹೋತ್ಸವ ಆಚರಣೆಗೆ ಸಜ್ಜಾಗಿರುವ ಕಿನ್ಯಾ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಯುವಕ ಮಂಡಲದ ಕಾರ್ಯಕ್ರಮ ಚಿನ್ನದಂತೆ ನಡೆಯಲಿ, ವರ್ಷ ಪೂರ್ತಿ ಕಾರ್ಯಕ್ರಮ ಯಶಸ್ವಿಯಾಗಿ ಸಂಘ ಇನ್ನಷ್ಟು ಬೆಳೆಯಲಿ ಎಂದು ತಲಪಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಬ್ರಹ್ಮಶ್ರೀ ಬಾಲಕೃಷ್ಣ ಭಟ್ ಪಂಜಳ ಆರ್ಶೀವನದ ಸಂದೇಶ ನೀಡಿದರು.
ಯಕ್ಷಗಾನ ಯುವಕ ಮಂಡಲದ ಹಿರಿಯ ಕಲಾವಿದ ವೆಂಕಪ್ಪ ಸಾಲ್ಯಾನ್ ಕಜೆ, ಮತ್ತು ಕೇಶವ ಆಚಾರ್ಯ ಕಿನ್ಯ ದಂಪತಿಗಳನ್ನು ಸನ್ಮಾನಿಸಲಾಯಿತು.ಯಕ್ಷಗಾನ ಸಂಘ 49 ವರ್ಷ ಸುದೀರ್ಘ ಕಾರ್ಯ ಚಟುವಟಿಕೆಗಳನ್ನು ಮಾಡಿಕೊಂಡು ಬಂದು ಸ್ವರ್ಣಮಹೋತ್ಸವ ಆಚರಣೆಗೆ ಸಜ್ಜಾಗಿದೆ, ಇದು ನಿಜವಾದ ದೊಡ್ಡ ಸಾಧನೆ. ಈ ಸಂಘ ಇನ್ನಷ್ಟು ಬೆಳೆಯಲಿ ಎಲ್ಲರಿಗೂ ಮಾದರಿ ಆಗಲಿ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಜನಾಡಿ ಶ್ರೀ ವಿಷ್ಣುಮೂರ್ತಿ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮ್‍ಮೋಹನ್ ಅಳ್ವ ತೇವುನಾಡ್‍ಗುತ್ತು ಮತ್ತು ಶ್ರೀ ಸೋಮನಾಥ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಯುವಕಮಂಡಲದ ಕಾರ್ಯ ಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ತಲಪಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಜೇಶ್ ಕೊಟ್ಟಾರಿ, ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಕೆ.ಟಿ. ಸುವರ್ಣ, ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ಸ್ಪರ್ದೆಗಳಲ್ಲಿ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.
ಸಂಘದ ಸದಸ್ಯ ರತ್ನಾಕರ ಆಳ್ವ ಮತ್ತು ಬಳಗದವರು ಯಕ್ಷಗಾನ ಸಂಪ್ರದಾಯದಲ್ಲಿ ಪ್ರಾರ್ಥನೆ ನೆರವೇರಿಸಿದರು. ಯುವಕ ಮಂಡಲದ ಅಧ್ಯಕ್ಷ ಬಾಬು ಶ್ರೀ ಶಾಸ್ತ್ರ ಕಿನ್ಯ ಸ್ವಾಗತಿಸಿದರು. ಗೌರವಾಧ್ಯಕ್ಷ ಟಿ ರಾಮಯ್ಯ ಕಿಲ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರಾಜೇಂದ್ರ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಸದಸ್ಯ ಹರ್ಷಿತ್ ಬಹುಮಾನದ ವರದಿ ಮಂಡಿಸಿದರು. ಜತೆ ಕಾರ್ಯದರ್ಶಿ ಹಂಸರಾಜ್ ಮತ್ತು ಸುವರ್ಣ ಮಹೋತ್ಸವ ಸಮಿತಿ ಜತೆ ಕಾರ್ಯದರ್ಶಿ ರಾಮಚಂದ್ರ ಸನ್ಮಾನ ಪತ್ರ ಓದಿದರು ಸುವರ್ಣ ಮಹೋತ್ಸವ ಸಮಿತಿಯ ಸಾಂಸ್ಕೃತಿಕ ಸಂಚಾಲಕ, ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.