UN NETWORKS
ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ ವಿಭಾಗದ ಟೂರಿಸಂ ಹಾಗೂ ಟ್ರಾವೆಲ್ ಮ್ಯಾನೇಜ್‍ಮೆಂಟ್‍ನ ವಿದ್ಯಾರ್ಥಿಗಳ ನೇತೃತ್ವದಲ್ಲಿ `ಆಹಾರೋತ್ಸವ-2019’ವು ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಆಹಾರೋತ್ಸವದಲ್ಲಿ ವಿವಿಧ ಬಗೆಯ ಖಾದ್ಯಗಳು
ಆಹಾರೋತ್ಸವದಲ್ಲಿ ಕರ್ನಾಟಕ, ಕೇರಳ ಶೈಲಿ ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ಬಹಳ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಪ್ರಮುಖವಾಗಿ ಸಸ್ಯಹಾರಿ ವಿಭಾಗದಲ್ಲಿ ಸೇಮೆ, ಅಪ್ಪಮ್, ನೀರುದೋಸೆ, ಗೀರೈಸ್, ಪನೀರ್ ಮಸಾಲ, ಗೋಬಿ ಮಂಚೂರಿ, ಬೇಬಿ ಕಾರ್ನ್ ಚಿಲ್ಲಿ, ವೆಜ್ ಬಿರಿಯಾನಿ, ವೆಜ್ ತಾಲಿ, ಕ್ಯಾರೆಟ್ ಹಲ್ವ, ಗುಲಾಬ್ ಜಾಮೂನ್, ಕಬ್ಬಿನ ಜ್ಯೂಸ್ ಹಾಗೂ ಮಾಂಸಾಹಾರ ವಿಭಾಗದಲ್ಲಿ ಚಿಕನ್ ಮಸಾಲ, ಚಿಕನ್ ಚಿಲ್ಲಿ, ಚಿಕನ್ ಗೀರೋಸ್ಟ್, ಟಿಕ್ಕ, ಫಿಶ್ ಕರಿ, ಬರ್ಗರ್, ಚಿಕನ್ ಬಿರಿಯಾನಿ, ಅಲ್ಪಂ, ಚಿಕನ್ ತಾಲಿ ಸೇರಿದಂತೆ ಹಲವು ಬಗೆಯ ರುಚಿಕರ ಖಾದ್ಯಗಳನ್ನು ಆಹಾರೋತ್ಸವದಲ್ಲಿ ಏರ್ಪಾಟು ಮಾಡಲಾಗಿತ್ತು. ಅಲ್ಲದೆ ಆಹಾರೋತ್ಸವದಲ್ಲಿ ಭಾಗವಹಿಸಿದ ಎಲ್ಲರಿಗೂ ಅನುಕೂಲವಾಗುವಂತೆ ಆಯಾಯ ತಿಂಡಿಗಳ ಹೆಸರು ಮಾತ್ರ ದರದ ಪಟ್ಟಿಯನ್ನು ಹಾಕಲಾಗಿತ್ತು ಮಾತ್ರವಲ್ಲದೆ ಸಸ್ಯಹಾರಿ ಹಾಗೂ ಮಾಂಸಹಾರಿ ವಿಭಾಗಗಳಿಗೆ ಪ್ರತ್ಯೇಕವಾಗಿ ಆಸನದ ವ್ಯವಸೈಯನ್ನು ಮಾಡಲಾಗಿತ್ತು. ಅಲ್ಲದೆ ಭಾಗವಹಿಸಿದ್ದ ವಿದ್ಯಾರ್ಥಿಗಳು ತಮಗೆ ಇಷ್ಟವಾದ ತಿಂಡಿ ತಿನಸುಗಳ ಸವಿಯುಂಡರು.
ನಿರೀಕ್ಷೆಗಿಂತ ಹೆಚ್ಚಿನ ಜನರು: ಎಂಬಿಎ ವಿಭಾಗದ ಟೂರಿಸಂ ಹಾಗೂ ಟ್ರಾವೆಲ್ ಮ್ಯಾನೇಜ್‍ಮೆಂಟ್‍ನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಆಹಾರೋತ್ಸವದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಜನರು ಭಾಗವಹಿಸಿದರು. 600 ರಿಂದ 700 ಜನರಿಗೆ ತಿಂಡಿಯ ಏರ್ಪಾಟು ಮಾಡಲಾಗಿತ್ತು. ಆದರೆ ಸಾವಿರಕ್ಕಿಂತಲೂ ಹೆಚ್ಚಿನ ಜನರು ಭಾಗವಹಿಸಿದ್ದರಿಂದ ಆಹಾರ ಸವಿಯಲು ಬಂದವರು ಕೆಲಹೊತ್ತು ಕಾಯಬೇಕಾಯಿತು. ಒಟ್ಟಿನಲ್ಲಿ ಆಹಾರ ಉತ್ಸವು ವಿಭಾಗದ ಪ್ರಾದ್ಯಾಪಕರು ಹಾಗೂ ವಿದ್ಯಾರ್ಥಿಗಳ ಪ್ರಯತ್ನದಿಂದ ಯಶಸ್ವಿಯಾಗಿ ನಡೆಯಿತು.
ವಿಭಾಗದ ವಿದ್ಯಾರ್ಥಿಗಳು ಹಾಗೂ ಪ್ರಾದ್ಯಾಪಕರ ಸಹಕಾರದೊಂದಿಗೆ ಪ್ರಥಮ ಬಾರಿಗೆ ಆಯೋಜಿಸಿದ ಆಹಾರ ಉತ್ಸವವು ಯಶಸ್ವಿಯಾಗಿ ನಡೆದಿದೆ. ಆದರೆ ಆಹಾರ ಉತ್ಸವಕ್ಕೆ ಇಷ್ಟು ಬೃಹತ್ ಸಂಖ್ಯೆಯಲ್ಲಿ ಜನರು ಬರುತ್ತಾರೆ ಎಂದು ತಿಳಿದುಕೊಂಡಿರಲಿಲ್ಲ, ಕಾರ್ಯಕ್ರಮವು ಪ್ರಾಯೋಗಿಕವಾಗಿ ನಮಗೆ ಉತ್ತಮ ಅನುಭವವನ್ನು ಕಟ್ಟಿಕೊಟ್ಟಿದೆ. ಪ್ರತೀ ವರ್ಷವೂ ಇಂತಹ ಕಾರ್ಯಕ್ರಮವನ್ನು ಆಯೋಜಿಸಿಕೊಳ್ಳಲು ತೀರ್ಮಾನಿಸಿದ್ದೇವೆ.
ರತೀಶ್
ಎಂಬಿಎ ಟೂರಿಸಂ ವಿದ್ಯಾರ್ಥಿ