UN NETWORKS
ಉಳ್ಳಾಲ: ಬಂಟರ ಸಂಘ ಉಳ್ಳಾಲ ವಲಯ ಆರ್ಥಿಕವಾಗಿ ಹಿಂದುಳಿದ ಸಮಾಜದ ಬಾಂಧವರ ಅಭಿವೃದ್ದಿಯೊಂದಿಗೆ ಶೈಕ್ಷಣಿಕ, ಕ್ರೀಡಾ ಪ್ರತಿನಿಧಿಗಳಿಗೆ ಪ್ರೋತ್ಸಾಹ ನೀಡಲು ಸಿದ್ಧವಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆಗಳನ್ನು ಸಂಘ ಅನುಷ್ಠಾನಗೊಳಿಸಲಿದೆ ಎಂದು ಬಂಟರ ಸಂಘ ಉಳ್ಳಾಲ ವಲಯದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು ಅಭಿಪ್ರಾಯಪಟ್ಟರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘ ತಲಪಾಡಿ ಗ್ರಾಮ ಸಮಿತಿಯ ಅಧ್ಯಕ್ಷ ಸುಧಾಕರ ಅಡ್ಯಂತಾಯ ಗುತ್ತು ಹೊಸಮನೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಬಂಟರ ಸಂಘ ಉಳ್ಳಾಲ ವಲಯದ ಮಾಜಿ ಅಧ್ಯಕ್ಷ ಡಾ| ಜಯಪಾಲ್ ಶೆಟ್ಟಿ ದೊಡ್ಡಮನೆ ತಲಪಾಡಿ, ತಲಪಾಡಿ ಅಲಂಕಾರಗುಡ್ಡೆ ಶ್ರೀ ಮಲರಾಯ ಧೂಮಾವತಿ ಬಂಟ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ಕಿಳ್ಳನಮನೆ ದೊಡ್ಡಮನೆ ತಲಪಾಡಿ, ಬಂಟರ ಸಂಘ ಉಳ್ಳಾಲ ವಲಯ ಯುವ ವಿಭಾಗದ ಅಧ್ಯಕ್ಷ ಪ್ರಶಾಂತ್ ಚೌಟ ಪಂಜಿಮುಂಡೇಲು, ದೇರಳಕಟ್ಟೆ ವಿದ್ಯಾರತ್ನ ವಿದ್ಯಾಸಂಸ್ಥೆ ಯ ಸೌಮ್ಯ ಆರ್. ಶೆಟ್ಟಿ , ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡಮಿ ಸೆಂಟ್ರಲ್ ರಿಸರ್ಚ್ ಲ್ಯಾಬೋರೆಟರಿ ರಿಸರ್ಚ್ ಆಸಿಸ್ಟೆಂಟ್ ಶಿಲ್ಪ ಶರತ್ ರಾಜ್ ಶೆಟ್ಟಿ , ತಲಪಾಡಿ ಗ್ರಾಮ ಪಂಚಾಯತ್ ಸದಸ್ಯ ಶೋಭ ಶೆಟ್ಟಿ ಶೆಟ್ಟಿಪಾಲು ಗುತ್ತು , ಬಂಟರ ಸಂಘ ತಲಪಾಡಿ ಗ್ರಾಮ ಸಮಿತಿ ಗೌರವಾಧ್ಯಕ್ಷ ಕ್ಯಾ| ಮಾಧವ ಶೆಟ್ಟಿ , ತಲಪಾಡಿ ವಿವೆಕಾನಂದನಗರ ವಿವೇಕ್ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಸಂತೋಷ್ ಅಡ್ಯಂತಾಯ ಬಾವ ತಲಪಾಡಿ ಉಪಸ್ಥಿತರಿದ್ದರು.
ತಲಪಾಡಿ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಮನೋಜ್ ಶೆಟ್ಟಿ ಮಕ್ಯಾರ್ ಸ್ವಾಗತಿಸಿದರು. ರಮೇಶ್ ಅಳ್ವ ರಾಮಯರಪಾಲು ವಂದಿಸಿದರು.