Site icon Ullalavani

ನಿಟ್ಟೆ ವಿಶ್ವವಿದ್ಯಾನಿಲಯದ ನಾಲ್ವರು ವಿದ್ಯಾರ್ಥಿಗಳಿಗೆ ಅಮೇರಿಕದ ವಿದ್ಯಾರ್ಥಿ ವೇತನ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ದೇರಳಕಟ್ಟೆ : ನಿಟ್ಟೆ ವಿಶ್ವವಿದ್ಯಾನಿಲಯದ ಸಾರ್ವಜನಿಕ ಆರೋಗ್ಯ ಸ್ನಾತಕೋತ್ತರ ವಿಭಾಗದ ನಾಲ್ವರು ವಿದ್ಯಾರ್ಥಿಗಳು ಅಮೇರಿಕದ ಮಿನ್ನೆಸೋಟದ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ವಿಶ್ವವಿದ್ಯಾನಿಲಯ ಮಿನ್ನಿಯಾಪೊಲೀಸ್ನಲ್ಲಿ ಮೂರು ವಾರಗಳ ಕಾಲ ನಡೆಯಲಿರುವ ಸಾರ್ವಜನಿಕ ಆರೋಗ್ಯ ಶಿಕ್ಷಣದ ವಿಚಾರದಲ್ಲಿ ಉನ್ನತ ಅಧ್ಯಯನಕ್ಕೆ ಆಯ್ಕೆಯಾಗಿದ್ದಾರೆ.

ಸಾರ್ವಜನಿಕ ಆರೋಗ್ಯ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಾದ ಡಾ. ಅರ್ಚನಾ ಆರ್., ಜೆನ್ನಿಫೆರ್ ಮಥಾಯಸ್, ನಿವೇದಿತಾ ಪಿ.ಜೆ., ನಿಲಿಟಾ ಸಲ್ದಾನ ಅಮೇರಿಕದ ವಿಶ್ವವಿದ್ಯಾನಿಲಯದಲ್ಲಿ ಮೂರು ವಾರಗಳ ಕಾಲ ಉನ್ನತ ಅಧ್ಯಯನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದು, ಇವರ ಅಧ್ಯಯನಕ್ಕೆ ಸುಮಾರು ೨೩ ಸಾವಿರ ಯುಎಸ್ ಡಾಲರ್ (೧೫ಲಕ್ಷ ರೂ.) ವಿದ್ಯಾರ್ಥಿ ವೇತನದೊಂದಿಗೆ ಆಯ್ಕೆಯಾಗಿದ್ದು, ನಿಟ್ಟೆ ವಿಶ್ವವಿದ್ಯಾನಿಲಯದಿಂದ ಮಿನ್ನೆಸೋಟ ವಿಶ್ವವಿದ್ಯಾನಿಲಯದ ಅಧ್ಯಯನ ಒಡಂಬಡಿಕೆಯಲ್ಲಿ ಅಮೇರಿಕಕ್ಕೆ ತೆರಳಲಿರುವ ಪ್ರಥಮ ವಿದ್ಯಾರ್ಥಿಗಳ ತಂಡವಾಗಿದೆ ಎಂದು ಕ್ಷೇಮದ ಡೀನ್ ಡಾ. ಸತೀಶ್ ಭಂಡಾರಿ ತಿಳಿಸಿದರು.

ಈ ಸಂದರ್ಭದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ರಮಾನಂದ ಶೆಟ್ಟಿ, ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ಸುದೀಪ್ ಶೆಟ್ಟಿ ಉಪಸ್ಥಿತರಿದ್ದರು.

Exit mobile version