Site icon Ullalavani

ಕೊಣಾಜೆ: ವಿಜ್ಞಾಪಣಾ ಪತ್ರ ಬಿಡುಗಡೆ ಕಾರ್ಯಕ್ರಮ

UN NETWORKS

ಕೊಣಾಜೆ: ಕೊಣಾಜೆ ಗ್ರಾಮದ ಬೆಳ್ಮ ಕೆಳಗಿನ ಮನೆ ಬಳಿಯ ಶ್ರೀ ಬ್ರಹ್ಮ ಸನ್ನಿಧಿ-ನಾಗ ಪರಿವಾರ ಕ್ಷೇತ್ರದ ಜೀರ್ಣೋದ್ದಾರ ಕಾರ್ಯದ ಅಂಗವಾಗಿ ವಿಜ್ಞಾಪಣಾ ಪತ್ರದ ಬಿಡುಗಡೆ ಕಾರ್ಯಕ್ರಮವು ನಡೆಯಿತು.

ವಿಜ್ಞಾಪಣಾ ಪತ್ರವನ್ನು ಅರ್ಚಕರಾದ ಜಗದೀಶ್ ಭಟ್ ಅಂಡಾಲ ಅವರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಘುರಾಮ ಗಟ್ಟಿಯವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೋಳಾರ ಸಾಯಿ ಟ್ರಸ್ಟ್‍ನ ಅಧ್ಯಕ್ಷರಾದ ಸೂರಜ್ ಕುಮಾರ್, ಕೊಣಾಜೆ ಪಂಚಾಯಿತಿ ಸದಸ್ಯೆ ಮುತ್ತು ಶೆಟ್ಟಿ, ವೇದಾವತಿ ಗಟ್ಟಿ, ಪಯ್ಯಗಟ್ಟಿ ಕುಟುಂಬದ ಹಿರಿಯರಾದ ಗಣೇಶ್ ಗಟ್ಟಿ ತುಂಬೆ, ಉಪನ್ಯಾಸಕರಾದ ಸತೀಶ್ ಗಟ್ಟಿ, ಕೋಟಿಪದವು ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ಸೀತಾರಾಮ ಬಂಗೇರ, ಯಾದವ ಬಿ.ಬೊಳ್ಳೆಕುಮೇರ್, ಸಪ್ತಸ್ವರ ಕಲಾತಂಡದ ಅಧ್ಯಕ್ಷರಾದ ನರೇಂದ್ರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ಕಾಯದರ್ಶಿ ಅಚ್ಯುತಗಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Exit mobile version