Site icon Ullalavani

ಕಾಪಿಕಾಡು ಹತ್ಯೆ ಆರೋಪಿ ಜೈಲಿನಲ್ಲಿ ಸಾವು

UN NETWORKS

ಉಳ್ಳಾಲ: ತೊಕ್ಕೊಟ್ಟು ಕಾಪಿಕಾಡಿನಲ್ಲಿ ಸಹೋದರಿಯ ಪತಿಯನ್ನು (ಬಾವನನ್ನು)ಹತ್ಯಗೈದು ವಿಚಾರಾಣಾಧೀನ ಕೈದಿಯಾಗಿ ಬೆಂಗಳೂರಿನ ಜೈಲಿನಲ್ಲಿದ್ದ ಆರೋಪಿ ಡೇನಿಸ್ ಡಿ.ಸೋಜ (78) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಡೆನೀಸ್ ಅವರು ಔಷದಿಗೆ ಹಣ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಆ. 12ರಂದು ತನ್ನ ಸಹೋದರಿ ಜಾನೆಟ್ ಮತ್ತು ಆಕೆಯ ಪತಿ ಜೋಸೆಫ್ ಅವರಿಗೆ ಕಬ್ಬಿಣ ರಾಡ್‍ನಿಂದ ಹಲ್ಲೆ ನಡೆಸಿದ್ದರು. ಗಂಬೀರ ಗಾಯಗೊಂಡಿದ್ದ ಜೋಸೆಫ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರೆ, ಸಹೋದರಿ ಜಾನೆಟ್ ಗುಣಮುಖರಾಗಿದ್ದರು.ರಾಡ್‍ನಿಂದ ಹಲ್ಲೆ ನಡೆಸಿದ ಬಳಿಕ ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದ ಡೇನಿಸ್ ಅವರನ್ನು ಮಂಗಳೂರಿನ ಕಾರಾಗೃಹದಲ್ಲಿ ಕೆಲ ಕಾಲ ಇದ್ದ ಬಳಿಕ ಬೆಂಗಳೂರಿನ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.
ಗುತ್ತಿಗೆದಾರರಾಗಿದ್ದ ಡೇನಿಸ್ ಅವರು ಅವಿವಾಹಿತರಾಗಿದ್ದು, ವೃದ್ದಾಪ್ಯದ ಹಿನ್ನಲೆಯಲ್ಲಿ ತನ ಸಹೋದರಿಯ ಕುಟುಂಬಕ್ಕೆ ತನ್ನ ಮನೆ ಬಳಿಯೇ ನಿವೇಶನ ನೀಡಿ ಮನೆ ಕಟ್ಟಲು ಸಹಕರಿಸಿದ್ದರು.

Exit mobile version