ಬೆಂಗಳೂರು : ಮಿಸ್ಬಾಹುಲ್ ಹುದಾ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಇದರ ವತಿಯಿಂದ ಮೀಲಾದ್ ಮೆಹಫಿಲ್ 2019 ಕಾರ್ಯಕ್ರಮ ಎಮ್ ಇ ಸಿ ಟಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಅಬೂಬಕ್ಕರ್ ಉಸ್ತಾದ್ ಎಂಎಫ್ ವಿ ದುಃವಾಶೀರ್ವಚನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ದಕ್ಷಿಣ ಕನ್ನಡ ಇದರ ಅಧ್ಯಕ್ಷ ಎನ್.ಪಿ.ಎಮ್ ಝೈನುಲ್ ,ಆಬಿದೀನ್ ತಂಙಳ್ ಉದ್ಘಾಟಿಸಿದರು. ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಪ್ರಿನ್ಸಿಪಾಲ್ ನ್ಯಾಯವಾದಿ ಹನೀಫ್ ಹುದವಿ ಮುಖ್ಯ ಪ್ರಭಾಷಣಗೈದರು.ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮುಹಮ್ಮದ್ ಹಾಜಿ ನಿರ್ವಹಿಸಿದರು.ವೇದಿಕೆಯಲ್ಲಿ ಅಬ್ದು ಸಮದ್ ದಾರಾನಿ,ಅಸ್ಲಂ ಫೈಝಿ, ಅಲಿ ದಾರಿಮಿ,ಜುನೈದ್ ಬೆಂಗಳೂರು,ಜಾಬಿರ್ ಹಾಜಿ,ಇಬ್ರಾಹಿಂ ಹಾಜಿ ಕತ್ತರ್, ಮುಷ್ತಾಖ್ ಹುದವಿ,ಶಹಜಲ್ ಹುದವಿ ಸುಲೈಮಾನ್ ಹಾಜಿ,ಮುಹಮ್ಮದ್ ಟಿ ಕೆ ,ಖಾಸಿಂ ಹಾಜಿ, ಅಯ್ಯೂಬ್ ಟಿ ಕೆ,ಸಲಾಂ,ಅಝೀಝ್,ಮೊಯ್ದೀನ್ ಇನ್ನಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂರುಲ್ ಹುದಾ ಮದ್ರಸ ವಿದ್ಯಾರ್ಥಿಗಳಿಂದ ಮದ್ ಹ್ ಗೀತೆ ಹಾಗೂ ಭಾಷಣ ಸ್ಪರ್ಧೆ ನಡೆಯಿತು. ಕಾರ್ಯಕ್ರಮವನ್ನು ಮುಹಮ್ಮದ್ ಅಲಿ ಸ್ವಾಗತಿಸಿದರು. ಸ್ವಾಗತ ಸಮಿತಿ ಕಂನ್ವಿನರ್ ಇಸ್ಮಾಹಿಲ್ ಲಿಂಮ್ರ ಸೊಫ್ಟೆಕ್ ವಂದಿಸಿದರು. ಶಂಸುದ್ದೀನ್ ಹನೀಫಿ ಕಾರ್ಯಕ್ರಮವನ್ನು ನಿರೂಪಿಸಿದರು.