Site icon Ullalavani

ದಾರಿಮಿಗಳಿಂದ ಯುವಸಮುದಾಯಕ್ಕೆ ಮಾರ್ಗದರ್ಶನ: ಅಬ್ದುಲ್ ರಶೀದ್

UN NETWORKS

ಉಳ್ಳಾಲ : ಜಿಲ್ಲೆಯಲ್ಲಿ ಇದುವರೆಗೆ ದಾರಿಮೀಸ್ ಅಸೋಸಿಯೇಶನ್ ಉತ್ತಮ ಕಾರ್ಯಕ್ರಮಗಳ ‌ಮೂಲಕ ಮೆಚ್ಚುಗೆ ಪಡೆದಿದೆ‌. ಅದೇ ರೀತಿ ಮುಸ್ಲಿಂ ಸಮುದಾಯದಲ್ಲಿ ದಾರಿತಪ್ಪುತ್ತಿರುವ ಯುವಕರಿಗೆ ಮಾರ್ಗದರ್ಶನ ‌ನೀಡಿ ಸರಿದಾರಿಗೆ ತರುವ ಪ್ರಯತ್ನ ನಡೆಸಬೇಕು ಎಂದು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು.

ಜಿಲ್ಲಾ ದಾರಿಮೀಸ್ ಅಸೋಸಿಯೇಶನ್ ಇದರ 17ನೇ ವಾರ್ಷಿಕೋತ್ಸವ ಪ್ರಯುಕ್ತ ಉಪ್ಪಿನಂಗಡಿಯ ಕರ್ವೇಲ್ ನಲ್ಲಿ ನ.31ರಂದು ನಡೆಯಲಿರುವ ಶೈಖುನಾ ಸಂಶುಲ್ ಉಲಮಾ ಹಾಗೂ ಅಬ್ದುಲ್ ‌ಜಬ್ಬಾರ್ ಉಸ್ತಾದ್ ಅನುಸ್ಮರಣಾ ಕಾರ್ಯಕ್ರಮದ ಪ್ರಚಾರಕ್ಕೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ವಠಾರದಲ್ಲಿ ಚಾಲನೆ ನೀಡಿ ಮಾತನಾಡಿದರು.ಇತ್ತೀಚಿಗೆ ನಮ್ಮೆಲ್ಲರನ್ನು ಅಗಲಿರುವ ಶೈಖುನಾ ಜಬ್ಬಾರ್ ಉಸ್ತಾದ್ ಅವರು ಪ್ರವಾದಿ (ಸ) ಅವರ ನಿರ್ದೇಶನದಂತೆ ಜೀವನ ಸಾಗಿಸಿರುವುದರಿಂದ ಅವರ ಹೆಸರು ಜನರ ಮನದಲ್ಲಿ ಶಾಶ್ವತವಾಗಿ‌ ನೆಲೆ ನಿಂತಿದೆ. ಈ ವರ್ಷ ಸಂಶುಲ್ ಉಲಮಾ ‌ಜೊತೆ ಜಬ್ಬಾರ್ ಉಸ್ತಾದ್ ಹೆಸರಲ್ಲೂ ಅನುಸ್ಮರಣೆ ದಾರಿಮೀಸ್ ಅಸೋಸಿಯೇಶನ್ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನ್ ಟ್ರಸ್ಟ್ ಜ.‌ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ ಮಾತನಾಡಿ, ದಾರಿಮೀಸ್ ಅಸೋಸಿಯೇಶನ್ ‌ಪ್ರಚಾರಕ್ಕೆ ಚಾಲನೆ ನೀಡುವಂತೆ ಬೇಡಿಕೆ ಮೇರೆಗೆ ಸ್ಪಂದಿಸಲಾಗಿದೆ, ಕಳೆದ ವಾರ ಬೆಂಗಳೂರಿನಲ್ಲಿ ನಡೆಯುವ ಉಂದುಲುಸ್ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗಿತ್ತು. ಇದು ದರ್ಗಾ ಆವರಣದಲ್ಲಿ ಎಲ್ಲಾ ಗುಂಪುಗಳು ಸಮಾನವಾಗಿ ಕಾಣುತ್ತಿರುವುದಕ್ಕೆ ಸಾಕ್ಷಿ ಎಂದರು‌. ಜಿಲ್ಲಾ ದಾರಿಮೀಸ್ ಅಸೋಸಿಯೇಶನ್ ಸಲಹೆಗಾರ ತಬೂಕ್ ದಾರಿಮಿ, ಸಯ್ಯಿದ್ ಮದನಿ ದಾವಾ ಕಾಲೇಜಿನ ಪ್ರಾಂಶುಪಾಲ ಹಾಫಿಲ್ ಝೈನ್ ಸಖಾಫಿ, ಕಾರ್ಯದರ್ಶಿ ಹನೀಫ್ ದಾರಿಮಿ, ಇಕ್ಬಾಲ್ ದಾರಿಮಿ, ಅಬ್ದುಲ್ಲಾ ಮುಸ್ಲಿಯಾರ್ ಇನ್ನಿತರರು ಉಪಸ್ಥಿತರಿದ್ದರು.

‘ಸಂಶುಲ್ ಉಲಮಾ ನಿರ್ದೇಶನದಂತೆ ಆರಂಭಗೊಂಡ ದಾರಿಮೀಸ್ ಅಸೋಸಿಯೇಶನ್ ಜಿಲ್ಲೆಯಲ್ಲಿ 17 ವರ್ಷಗಳ ಹಿಂದೆ ಆರಂಭಿಸಲಾಗಿದ್ದು ಪ್ರಸ್ತುತ 500 ದಾರಿಮಿಗಳಿದ್ದಾರೆ. ಪ್ರತಿವರ್ಷ ಧಾರ್ಮಿಕ ಚೌಕಟ್ಟಿನಡಿಯಲ್ಲಿ ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ’
ಕೆ.ಬಿ.ಅಬ್ದುಲ್ ಖಾದರ್ ದಾರಿಮಿ, ಅಧ್ಯಕ್ಷ, ಜಿಲ್ಲಾ ದಾರಿಮೀಸ್ ಅಸೋಸಿಯೇಷನ್

Exit mobile version