Site icon Ullalavani

ಕಿನ್ಯ: ತಾಜುಲ್ ಉಲಮಾ ಅನುಸ್ಮರಣಾ ಸಂಗಮ

UN NETWORKS

ಉಳ್ಳಾಲ: ಎಸ್ ವೈಎಸ್, ಎಸ್ಸೆಸ್ಸೆಫ್ ಹಾಗೂ ಎಸ್ ಬಿಎಸ್ ಕುತುಬಿ ನಗರ ಕಿನ್ಯ ಶಾಖೆವತಿಯಿಂದ ತಾಜುಲ್ ಉಲಮಾ ಅನುಸ್ಮರಣಾ ಸಂಗಮ ಕುತುಬಿ ನಗರ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಿತು.

ಸಯ್ಯದ್ ಅಲವಿ ತಂಙಳ್ ಕಿನ್ಯ ದುಅ ನೇತೃತ್ವ ವಹಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಮೂಸ ಹಾಜಿ ಕುತುಬಿನಗರ ಧ್ವಜಾರೋಹಣ ಗೈದರು. ಎಸ್ ವೈಎಸ್ ಕುತುಬಿ ನಗರ ಶಾಖೆಯ ಅಧ್ಯಕ್ಷ ಮುಹಮ್ಮದ್ ಹನೀಫ್ ಸಖಾಫಿ ಕಾರ್ಯಕ್ರಮ ಅಧ್ಯಕ್ಷತೆವಹಿಸಿದರು.ಎಸ್ ವೈಎಸ್ ಮಂಗಳೂರು ವಲಯ ಅಧ್ಯಕ್ಷ ಮುಹಮ್ಮದಾಲಿ ಸಖಾಫಿ ಅಶ್-ಅರಿಯ್ಯಾ ಸುರಿಬೈಲ್, ಡಾ.ಫಾರೂಕ್ ನ ಈಮಿ ಅಲ್- ಬುಖಾರಿ ಕೊಲ್ಲಂ ಮುಖ್ಯ ಪ್ರಭಾಷಣಗೈದರು.ಕಾರ್ಯಕ್ರಮದಲ್ಲಿ ದ.ಕ ಉಸ್ತುವಾರಿ ಸಚಿವ ಯು.ಟಿ ಖಾದರ್ ರಿಗೆ ಸನ್ಮಾನಿಸಲಾಯಿತು.

ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್-ಹೈದ್ರೂಸಿ ತಂಙಳ್ ಕಿಲ್ಲೂರು, ಕುತುಬಿನಗರ ಬದ್ರಿಯ ಜುಮಾ ಮಸೀದಿಯ ಅಧ್ಯಕ್ಷ ಅರಬಿ ಕುಂಞ, ಖತೀಬ್ ಮುಹಮ್ಮದ್ ಶಫೀಕ್ ಸ ಅದಿ, ಪಿಲಿಕೂರು ಮುಹ್ಯಿದ್ದೀನ್ ಜುಮಾ ಮಸೀದಿ ಖತೀಬ್ ಅಬ್ದುಲ್ ಬಾರಿ ಸ ಅದಿ, ಪಂಜಳ‌ ಬದ್ರಿಯಾ ಜುಮಾ ಮಸೀದಿ ಖತೀಬ್ ಮಹ್ಮೂದ್ ಸಖಾಫಿ, ಚೆರಿಯ ಮಸೀದಿ ಖತೀಬ್ ಮುಹಮ್ಮದ್ ಹಾರಿಸ್ ಸಖಾಫಿ, ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಅಧ್ಯಕ್ಷ ಇರ್ಫಾನ್ ನೂರಾನಿ, ಎಸ್ ವೈಎಸ್ ದೇರಳಕಟ್ಟೆ ಸೆಂಟರ್ ಅಧ್ಯಕ್ಷ ಏಷ್ಯನ್ ಬಾವ ಹಾಜಿ, ಕೆ.ಎ ಅಬೂಬಕ್ಕರ್, ತಕ್ವತುಲ್ ಇಸ್ಲಾಂ ಅಧ್ಯಕ್ಷ ಇಬ್ರಾಹಿಂ ಹಾಜಿ, ಕಿನ್ಯ ಗ್ರಾ.ಪಂ ಉಪಾಧ್ಯಕ್ಷ ಸಿರಾಜುದ್ದೀನ್ ಕಿನ್ಯ, ಎಸ್ ವೈಎಸ್ ಕುತುಬಿ ಶಾಖೆ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ಕುತುಬಿ ನಗರ ಶಾಖೆಯ ಕಾರ್ಯದರ್ಶಿ ಇರ್ಷಾದ್ ಮುಸ್ಲಿಯಾರ್ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಇಕ್ಬಾಲ್ ಅಲಿ ವಂದಿಸಿದರು.

Exit mobile version