Site icon Ullalavani

ಮಂಜನಾಡಿ: “ಅಲ್ ಮದೀನಾ”ದಲ್ಲಿ 70ನೇ ಗಣರಾಜೋತ್ಸವ ಆಚರಣೆ

UN NETWORKS

ನರಿಂಗಾನ: ಮಂಜನಾಡಿಯ ಅಲ್ ಮದೀನಾ ಸಂಸ್ಥೆಯಲ್ಲಿಂದು ಬೆಳಗ್ಗೆ 70ನೇ ಗಣರಾಜೋತ್ಸವವನ್ನು ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಶೈಖುನಾ ಅಬ್ಬಾಸ್ ಉಸ್ತಾದ್ ಅವರ ಆರ್ಶೀವಾದದೊಂದಿಗೆ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಧ್ವಜರೋಹಣಗೈದರು‌‌.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಅ್ ವಾ ಕಾಲೇಜು ಮುದರ್ರಿಸ್ ಅಬ್ದುಲ್ ಅಝೀಝ್ ಅಹ್ಸನಿ ವಹಿಸಿದ್ದರು.ಅಶ್ರಫ್ ಸಖಾಫಿ ಪ್ರಾಸ್ತಾವಿಕ ಭಾಷಣವನ್ನು ಮಂಡಿಸಿದರು.ದಅ್ ವಾ ಕಾಲೇಜು ಮುದರ್ರಿಸ್ ಅಬ್ದುರ್ರಹ್ಮಾನ್ ಅಹ್ಸನಿ, ರಿಸಾಲ ಅಕಾಡಮಿ ಪ್ರಾಧ್ಯಾಪಕ ಕಬೀರ್ ಸಅದಿ, ಹಿಫ್ಳುಲ್ ಕುರ್ ಆನ್ ಕಾಲೇಜಿನ ಪ್ರಾಧ್ಯಾಪಕರಾದ ಹಾಫಿಳ್ ಮರ್ಶದ್ ಹುಮೈದಿ, ಹಾಫಿಳ್ ಇಸ್ಮಾಯೀಲ್ ಹನೀಫಿ, ನಾರ್ತ್ ಕರ್ನಾಟಕ ಹೋಮ್ ನ ಬದ್ರುದ್ದೀನ್ ಹಿಮಮಿ, ಅಬ್ರಾರ್ ಫಾಝಿಲಿ ಬಿಹಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಅದ್ ಮೊಂಟುಗೋಳಿ ಕಾರ್ಯಕ್ರಮ ನಿರೂಪಿಸಿದರು. ಬಿಶಾರತುಲ್ ಮದೀನಾ ಅಧ್ಯಕ್ಷ ಅನೀಸ್ ಸುರತ್ಕಲ್ ಸ್ವಾಗತಿಸಿದರು. ನೌಫಲ್ ಮಲಾರ್ ವಂದಿಸಿದರು.

Exit mobile version