UN NETWORKS
ಉಳ್ಳಾಲ: ಮಂಗಳೂರು/ಕಾಸರಗೋಡು ಆರ್ಯ ಯಾನೆ ಮರಾಠ ಸಮಾಜ ಸಂಘದ ವಾರ್ಷಿಕ ಕ್ರೀಡಾ ಕೂಟ ಇತ್ತೀಚೆಗೆ ಬೋಂದೆಲ್ ಮೈದಾನ ಹಾಗೂ ಪೊಲೀಸ್ ಕವಾಯತು ಮೈದಾನದಲ್ಲಿ ಜರಗಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಯತೀಂದ್ರ ಬಹುಮಾನ್ ಪ್ರಶಸ್ತಿ ವಿತರಿಸಿ ವಿಜೇತ ರನ್ನು ಅಭಿನಂದಿಸಿದರು.
ಅತಿಥಿಗಳಾಗಿ ಸಂಜೀವ ರಾವ್ ಸಿಂಧ್ಯ, ಕೋಕಿಲಾ ಹರೀಶ್ ಲಾಡ್, ಸುಧಾಕರ್ ಬಹುಮಾನ್, ವೇದಿತ್ ರಾವ್ ಲಾಡ್, ಪ್ರೇಮಲತಾ ವೈ ರಾವ್ , ಕೇಶವ್ ರಾವ್ ಪವಾರ್,ಕೀರ್ತನ್ ರಾವ್ ಲಾಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಪುರುಷೋತ್ತಮ ಬಹುಮಾನ್, ಕೃಷ್ಣ ಧರೇಕರ್,ಕೋಶಾಧಿಕಾರಿ ಶ್ರೀಧರ್ ಬಹುಮಾನ್, ಜತೆ ಕಾರ್ಯದರ್ಶಿ ಪ್ರದೀಪ್ ಚಂದ್ರ ಜಾಧವ್,ಶ್ರೀಧರ್ ಪಾಟೀಲ್ , ಕಾರ್ಯಕಾರಿ ಸಮಿತಿ ಸದಸ್ಯರು, ವಲಯ ಸಂಚಾಲಕರು ಸೇರಿದಂತೆ ಸುಮಾರು ಒಂದು ಸಾವಿರ ಸಮಾಜ ಬಾಂಧವರು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಸುಮಾರು 400 ಕ್ಕೂ ಹೆಚ್ಚು ಮಂದಿ ಸಮಾಜ ಸಂಘದ ಸದಸ್ಯತ್ವ ಪಡೆದರು.
ಕ್ರೀಡಾ ಸಮಿತಿ ಸದಸ್ಯರಾದ ಮೋಹನ್ ರಾವ್ ಭೊಂಸ್ಲೆ, ರಾಜ್ ಕುಮಾರ್ ಲಾಡ್, ಧರ್ಮರಾಜ್ ಜಾಧವ್, ಪದ್ಮನಾಭ ರಾವ್ ಜಾಧವ್,ದಿವ್ಯ ಪ್ರದೀಪ್ ಜಾಧವ್,ಅನಂತ್ ಪದ್ಮನಾಭ ಸಿಂಧ್ಯ, ವಾಮನ ಮುಲ್ಲಂಗೊಡ್, ಧನುಷ್ ಮುಲ್ಲಂಗೋಡ್, ಸುಧಾಕರ್ ವಾಗ್ಮ ನ್, ಯಶ್ವತ ಧರೇಕರ್, ಸಾರಿಕ ಭೊಂಸ್ಲೆ, ಧ್ರುವೇಶ್ ಚಂದ್ರಮಾನ್, ಸುಧಾಕರ್ ಪಾಟೀಲ್,ಹರಿಕೇಶವ್ ಜಾಧವ್ ಮುಂತಾದವರು ಸಹಕರಿಸಿದರು.
ಕಾರ್ಯ ದರ್ಶಿ ರಾಜೇಶ್ ಪಾಟೀಲ್ ಸ್ವಾಗತಿಸಿದರು. ಕ್ರೀಡಾ ಸಂಚಾಲಕ ಗಿರೀಶ್ ಭೊಂಸ್ಲೆ ವಂದಿಸಿದರು .ದಿವ್ಯ ಪವಾರ್, ಸಾರಿಕ ಶ್ರೀ ಭೊಂಸ್ಲೆ ಮತ್ತು ಲೋಕೇಶ್ ಬಹುಮಾನ ವಿಜೇತರ ವಿವರ ನೀಡಿದರು.