ಜ. 27ರಂದು ಕುತ್ತಾರು ಶ್ರೀ ರಕ್ತೇಶ್ವರೀ ಹಾಗೂ ಕೊರಗಜ್ಜ ಕ್ಷೇತ್ರದ ನಿರ್ಮಾಣದ ಶಿಲಾನ್ಯಾಸ
UllalaVani
UN NETWORKS
ಉಳ್ಳಾಲ: ಸೋಮೇಶ್ವರ ಗ್ರಾಮದ ಕುತ್ತಾರು ಆದಿಸ್ಥಳ ಶ್ರೀ ರಕ್ತೇಶ್ವರೀ ಎಳುವೆರ್ ಸಿರಿಕುಲು ಕೊರಗಜ್ಜ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ರಕ್ತೇಶ್ವರೀ ಹಾಗೂ ಕೊರಗಜ್ಜ ಕ್ಷೇತ್ರದ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಜ. 27ರಂದು ನಡೆಯಲಿದೆ.
ಕ್ಷೇತ್ರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕ್ಷೇತ್ರದ ನಿರ್ಮಾಣ ಸಮಿತಿಯ ಪ್ರಮುಖರಾದ ಹರೀಶ್ ಕುತ್ತಾರ್ ಮಾಹಿತಿ ನೀಡಿ ಈ ಈ ಪ್ರದೇಶದಲ್ಲಿ ಜನರು ಕಷ್ಟ ನಷ್ಟ ಅನುಭವಿಸಿ, ರೋಗ ರುಜಿನಗಳಿಂದ ಬಳಲಿದ್ದು, ಹಲವಾರು ದುರ್ಮರಣಗಳು ನಡೆದ ಹಿನ್ನಲೆಯಲ್ಲಿ ಊರಿನ ಹಿರಿಯರು ಮತ್ತು ಆಸ್ತಿಕ ಬಂಧುಗಳಅಷ್ಟಮಂಗಳ ಮತ್ತು ತಾಂಬೂಲ ಪ್ರಶ್ನೆಗಳ ಚಿಂತೆ ನಡೆಸಿದಾಗ ಈ ಸ್ಥಳವು ರುಷಿ ಮುನಿಗಳಿದ್ದ ತಪೋಭೂಮಿಯೆಂದು ತಿಳಿದು ಬಂದಿದ್ದು, ಶ್ರೀ ಆದಿಮಾಯೆ ರಕ್ತೇಶ್ವರೀ ಮಾತೆಯ ಆದಿಸ್ಥಳವಾಗಿದ್ದು, ಕೊರಗಜ್ಜ ದೈವದ ಮೂಲ ನೆಲೆಯಾಗಿದ್ದು, ಶ್ರೀ ಕ್ಷೇತ್ರ ನಿರ್ಮಾಣ ನಡೆಸುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ವಿವಿಧ ಧಾರ್ಮಿಕ ವಿ„ ವಿಧಾನಗಳನ್ನು ಪೂರೈಸಿದ್ದು, ಶ್ರೀ ಕ್ಷೇತ್ರದಲ್ಲಿ ಮವಂತೂರು ಶ್ರೀ ರಾಜಾರಾಮ ಭಟ್ ಅವರ ಪೌರೋಹಿತ್ಯದಲ್ಲಿ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರ ಉಳಿಯದ ಧರ್ಮದರ್ಶಿ ಶ್ರೀ ದೇವು ,ಮೂಲ್ಯಣ್ಣ ಅವರಿಂದ, ವಾಸ್ತು ಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತರ ವಾಸ್ತು ಶಿಲ್ಪಾನುಸಾರ ಬೆಳಗ್ಗೆ 9.45ಕ್ಕೆ ಶಿಲಾನ್ಯಾಸ ಕಾರ್ಯ ನಡೆಯಲಿದ್ದು, ಬಳಿಕ ವಿಜ್ಞಾಪನ ಪತ್ರ ಬಿಡುಗಡೆ, ಮಧ್ಯಾಹ್ನ ಅನ್ನ ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದರು.