Site icon Ullalavani

ಉಳ್ಳಾಲ : ಉಚಿತ “ದಿಶಾ “ಉದ್ಯಮ ಶೀಲತಾ ಜಾಗೃತಿ ಶಿಬಿರ

UN NETWORKS

ಉಳ್ಳಾಲ: ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು, ಸಿಡಾಕ್ಧಾರವಾಡ, ವೀರಾಂಜನೇಯ ವ್ಯಾಯಾಮ ಶಾಲೆ ಹಾಗೂ ವೈದ್ಯನಾಥ, ನಾಗಬ್ರಹ್ಮಶ್ರೀ ಮಹಾಗಣಪತಿ ದೇವಸ್ಥಾನ, ಬೈದೆರೆ ಪಾಲು ಸುಂದರಿಬಾಗ್ ಉಳ್ಳಾಲ ಇವರ ಸಂಯುಕ್ತಾಶ್ರಯದಲ್ಲಿ ದೇವಳದ ವಠಾರದಲ್ಲಿ ಸ್ಥಳೀಯ ಹಾಗೂ ಆಸುಪಾಸಿನ ವಿವಿಧ ಸ್ವಸಹಾಯ ಸಂಘದ ಸದಸ್ಯರುಗಳಿಗೆ ಉಚಿತ “ದಿಶಾ ” ಉದ್ಯಮ ಶೀಲತಾ ಜಾಗೃತಿ ಶಿಬಿರ ವ್ಯಾಯಾಮ ಶಾಲೆಯ ದೈಹಿಕ ಶಿಕ್ಷಕರಾದ  ವಿಜಯ ಅಮೀನ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಇಲಾಖೆಯ ಜಂಟಿ ನಿರ್ದೇಶಕರಾದ  ಅರವಿಂದ ಬಾಲೇರಿಯವರು ಮುಖ್ಯಅತಿಥಿಗಳಾಗಿ ಭಾಗವಹಿಸಿದರು.ದೇವಳದ ಪ್ರಧಾನ ಅರ್ಚಕರಾದ ಶ್ರೀಲಕ್ಷ್ಮೀಶ ಪುತ್ತೂರಾಯ ಶಿಬಿರಕ್ಕೆ ಚಾಲನೆ ನೀಡಿದರು.ಉಳ್ಳಾಲ ನಗರಸಭೆಯ ಮಾಜಿ ಕೌನ್ಸಿಲರ್ ಮಹಾಲಕ್ಷ್ಮಿ, ಹರಿಶ್ಚಂದ್ರ ಅಡ್ಕ, ಕೌಶಲ್ಯ ತರಬೇತಿದಾರರು ಹಾಗೂ ಸ್ಥಳೀಯ ಉದ್ಯಮಿ ಶ್ರೀಧರ್ ಕುಂಬ್ಳೆ ಭಾಗವಹಿಸಿ ಮಾತನಾಡಿದರು.ಸಿಡಾಕ್ ನ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಹಾಗೂ ಸಿಡಾಕ್ ಕೇಂದ್ರ ವ್ಯವಸ್ಥಾಪಕ ವಿನಾಯಕ ಪ್ರಭು ಇವರು ಉದ್ಯಮ ಶೀಲತೆ ಹಾಗೂ ದಿಶಾ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಸಿಡಾಕ್‍ನ ಸಲಹೆಗಾರ ಪ್ರವಿಷ್ಯ ಹಾಗೂ ವಿದ್ಯ, ಶ್ರೀವೀರಾಂಜನೇಯ ವ್ಯಾಯಾಮ ಶಾಲೆಯ ಪ್ರಕಾಶ್, ವಸಂತ್ ಉಳ್ಳಾಲ ಹಾಗೂ ಕೆನರಾ ಬ್ಯಾಂಕಿನ ನಿವೃತ್ತ ಶಾಖಾ ವ್ಯವಸ್ಥಾಪಕ ಅಶೋಕ ಬಾಡಿ ಉಪಸ್ಥಿತರಿದ್ದರು.ಸ್ವಸಹಾಯ ಸಂಘದ ಸುಮಾರು ನೂರು ಮಂದಿ ನಿರುದ್ಯೋಗಿ ಯುವಕ ಯುವತಿಯರು ಸಕ್ರಿಯವಾಗಿ ಭಾಗವಹಿಸಿದರು. ಜಯಂತ್ ಸಂಕೋಳಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.ನವೀನ್ ನಾಯಕ್ ವಂದಿಸಿದರು.

Exit mobile version