Site icon Ullalavani

ಕಿನ್ಯ: ಕಿನ್ಯ ಕೇಶವ ಶಿಶು ಮಂದಿರ ತ್ರಿಂಶತಿ ಕಾರ್ಯಕ್ರಮ

UN NETWORKS

ಕಿನ್ಯ: ನಮ್ಮ ಸಂಸ್ಕೃತಿ ಉಳಿಯಬೇಕಾದರೆ ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ಕಲಿಸಬೇಕು. ಅವರು ಸಣ್ಣ ಪ್ರಾಯದಲ್ಲಿ ಒಳ್ಳೆಯ ಸಂಸ್ಕೃತಿ ಕಲಿತರೆ ಮುಂದಿನ ನಮ್ಮ ಸಮಾಜದಲ್ಲಿ ಉತ್ತಮ ಪ್ರಜೆಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಾಸರಗೋಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಅಭಿಪ್ರಾಯಪಟ್ಟರು.

ಕಿನ್ಯ ಕೇಶವ ಶಿಶು ಮಂದಿರದ 30ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಶನಿವಾರ ಉದ್ಘಾಟಿಸಿ ಮಾತನಾಡಿದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೋಮಯಾಜಿ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್‍ನ ಮೆನೆಜಿಂಗ್ ಡೈರೆಕ್ಟರ್ ಬಿ. ರಘುನಾಥ ಸೋಮಯಾಜಿ ಮಾತನಾಡಿ ಈಗಿನ ಯುವಕರು, ಮಕ್ಕಳು ಬೇರೆ ದೇಶಕ್ಕೆ ಹೋಗಿ ಕಲಿಯುತ್ತಿದ್ದಾರೆ. ನಮ್ಮ ದೇಶದಲ್ಲೇ ಒಳ್ಳೆಯ ಕೆಲಸಗಳಿವೆ. ಇಲ್ಲಿಯೇ ಶಿಕ್ಷಣ ಪಡೆದರೆ ಇಲ್ಲಿಯೇ ಒಳ್ಳೆಯ ಕೆಲಸ ಮಾಡಬಹುದು ಎಂದರು.ಮಂಗಳೂರು ವಿಭಾಗ ಕುಟುಂಬ ಪ್ರಭೋದನ ಪ್ರಮುಖ್ ಗಜಾನನ ಪೆ` ಮುಖ್ಯ ಪ್ರಭಾಷಣ ಮಾಡಿದರು. ನರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಉತ್ತಮ ಸಂದೇಶ ನೀಡಿದರು. ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧೀಕ್ಷಕಿ ಶೃತಿ ಎನ್.ಎಸ್., ಕೊಲ್ಯ ಶ್ರೀ ಮುಕಾಂಬಿಕ ದೇವಸ್ಥಾನ ಟ್ರಸ್ಟಿ ಮಧುಸೂದನ ಅಯ್ಯರ್ ಮಂಗಳೂರು, ಉದ್ಯಮಿ ಶ್ರೀಧರ್ ಶೆಟ್ಟಿ ಉಪ್ಪಳ ಹಾಗೂ ಶಿಶು ಮಂದಿರದ ಅಧ್ಯಕ್ಷ ಶಿವರಾಮ ಶೆಟ್ಟಿ ಸಾಂತ್ಯಗುತ್ತು ಉಪಸ್ಥಿತರಿದ್ದರು.

ಕೃತಿಕ್, ನಿಧಿ, ಕ್ಷಮಿತಾ, ಋುಷಿ ಅಮೃತ ವಚನ ವಾಚಿಸಿದರು. ಕ್ಷಮಿತಾ ಸರ್ವಜ್ಞನ ವಚನ ವಾಚಿಸಿದರು. ಮೋಹನ್‍ದಾಸ್ ಶೆಟ್ಟಿ ನೆತ್ತಿಲಬಾಳಿಕೆ ಸ್ವಾಗತಿಸಿದರು. ನಿ ಶ್ಲೋಕ ಪಠಿಸಿದರು. ಮಾತೃ ಮಂಡಳಿಯವರಿಂದ ದೇಶ ಭಕ್ತಿಗೀತೆ ಗೀತೆ ಗಾಯನ ನಡೆಯಿತು. ರಮನಾಥ ಮಿತ್ತಡ ಸಂದೇಶ ವಾಚಿಸಿದರು. ಕಾರ್ಯದರ್ಶಿ ಚೇತನ್‍ಕುಮಾರ್ ಪಿಲಿಕೂರ್ ವಾರ್ಷಿಕ ವರದಿ ವಾಚಿಸಿದರು. ಶಿಶು ಮಂದಿರದ ವ್ಯವಸ್ಥಾಪಕ ನಾರಾಯಣ ಕಜೆ ಪ್ರಸ್ತಾವಿಕವಾಗಿ ಮಾತನಾಡಿದರು. ವಾರಿಜ ವಿ. ಶೆಟ್ಟಿ ಕೊಂಡಾಣ ಸಾಂಸ್ಕೃತಿಕ ಕಾರ್ಯಕ್ರಮ ಪಟ್ಟಿ ಓದಿದರು. ಕಿರಣ್ ಕಜೆ ಬಹುಮಾನ ವಿಜೇತರ ಹೆಸರು ವಾಚಿಸಿದರು. ಮಾಜಿ ಕಾರ್ಯದರ್ಶಿ ಕೇಶವ ಕಜೆ ಕಾರ್ಯಕ್ರಮ ನಿರೂಪಿಸಿದರು. ರವಿ ಕನಕ ಮುಗೇರು ವಂದಿಸಿದರು.

Exit mobile version