UN NETWORKS
ದೇರಳಕಟ್ಟೆ: ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿವಿ ಔಷಧೀಯ ವಿಭಾಗಕ್ಕೆ ಸಂಬಂಧಿಸಿದಂತೆ ಮೆಡಿಟೆಕ್ ಇಂಡಿಯಾದ ಅಂಗ ಸಂಸ್ಥೆಯಾದ ಮೆಡಾರ್ಗೊನಿಕ್ಸ್ ಪ್ರೈ. ಲಿ. ಸಂಸ್ಥೆಯ ಜೊತೆಗೆ ಮಂಗಳವಾರ ಒಡಂಬಡಿಕೆ ಮಾಡಿಕೊಂಡಿದ್ದು ಉಭಯ ಸಂಸ್ಥೆಗಳ ಪ್ರಮುಖರು ಸಹಿ ಹಾಕಿದರು.
ಮೆಡೋರ್ಗನಿಕ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಪ್ರಮೋದ್ ಹೆಗ್ಡೆ ಹಾಗೂ ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಒಪ್ಪಂದಕ್ಕೆ ಸಹಿ ಹಾಕಿದರು. ಮೆಡೋರ್ಗನಿಕ್ಸ್‍ನ ಗುಣಮಟ್ಟ ಪರಿಶೀಲನಾ ಮುಖ್ಯಸ್ಥ ಶ್ರೀಕುಮಾರ, ನಿಟ್ಟೆ ವಿವಿ ಸಹ ಕುಲಪತಿ ಪ್ರೊ.ಡಾ. ಎಂ.ಎಸ್. ಮೂಡಿತ್ತಾಯ, ನಿಟ್ಟೆ ವಿವಿ ಸಂಶೋಧನಾ ನಿರ್ದೇಶಕಿ ಪ್ರೊ.ಡಾ. ಇಂದ್ರಾಣಿ ಕರುಣಾ ಸಾಗರ್, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಪ್ರೊ.ಡಾ.ಪಿ.ಎಸ್. ಪ್ರಕಾಶ್ ಹಾಗೂ ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಔಷಧೀಯ ಮಹಾವಿದ್ಯಾಲಯದ ಡೀನ್ ಡಾ. ಸಿ.ಎಸ್. ಶಾಸ್ತ್ರಿ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.