Site icon Ullalavani

ರಾಹುಲ್ ದುಬೈ ಭೇಟಿಗೆ ಪೈಲಟ್ ಆಗಿದ್ದ ಮಂಗಳೂರು ಮೂಲದ ಅನಿವಾಸಿ ಉದ್ಯಮಿ

UN NETWORKS

ದುಬೈ: ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ದುಬೈ ಭೇಟಿ ನೀಡಿದ್ದ ವೇಳೆ ಮಂಗಳೂರು ಮೂಲದ ಅನಿವಾಸಿ ಉದ್ಯಮಿ ಅಬ್ದುಲ್ ಹಮೀದ್ ಅವರು ಪೈಲಟ್ ( ಪ್ರಮುಖರಾಗಿ) ಪ್ರದೇಶ ವೀಕ್ಷೆಣೆಗೆ ಸಹಕರಿಸಿದ್ದು, ಇದೇ ವೇಳೆ ಅನಿವಾಸಿ ಉದ್ಯಮಿಯಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ನಾದ್ಯಂತ ಪ್ರಖ್ಯಾತಿ ಪಡೆದಿರುವ ಅಬ್ದುಲ್ ಹಮೀದ್ ರವರನ್ನು ರಾಹುಲ್ ಗಾಂಧಿ ಪ್ರಶಂಸಿದ್ದಾರೆ.

ಅಬ್ದುಲ್ ಹಮೀದ್ ಓರ್ವ ಯಶಸ್ವಿ ಉದ್ಯಮಿಯಾಗಿ ಅನಿವಾಸಿಯಾಗಿದ್ದುಕೊಂಡು ಭಾರತ ದೇಶಕ್ಕೆ ನೀಡುತ್ತಿರುವ ಕೊಡುಗೆಗಳ ಕುರಿತು ರಾಹುಲ್ ಗಾಂಧಿ ಪ್ರಶಂಸೆಯ ಮಾತುಗಳನ್ನಾಡಿದರು. ಅಬ್ದುಲ್ ಹಮೀದ್ ಕರಾವಳಿ ಮೂಲದವರಾಗಿದ್ದಾರೆ. ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ತಂತ್ರಜ್ಞಾನದಲ್ಲಿ ಹಾಗೂ ನೂತನ ಆವಿಷ್ಕಾರ ವಿಭಾಗದ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.

Exit mobile version