Site icon Ullalavani

ಅನುದಾನ ಕೊಟ್ಟದ್ದು ಪ್ರಧಾನಿ ಮೋದಿ, ತೆಂಗಿನಕಾಯಿ ಒಡೆದದ್ದು ಮಾತ್ರ ಯು.ಟಿ.ಖಾದರ್ : ಸಂಸದ ನಳಿನ್ ಕುಮಾರ್ ಕಟೀಲು

UN NETWORKS

ಮುಡಿಪು : ಕೇಂದ್ರ ಸರ್ಕಾರ ರಾಜ್ಯಕ್ಕೆ ಏನೂ ಕೊಟ್ಟಿಲ್ಲ ಎಂದು ಹೇಳುತ್ತಿರುವವರು ಪ್ರಧಾನಿ ಮೋದಿ ರಾಜ್ಯಕ್ಕೆ ಎರಡು ಲಕ್ಷ ಕೋಟಿ ರೂ. ಅನುದಾನ ಕೊಟ್ಟಿದ್ದು, ಮಂಗಳೂರು ಕ್ಷೇತ್ರದಲ್ಲಿ ತೆಂಗಿನಕಾಯಿ ಒಡೆದವರು ಖಾದರ್ ಆಗಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದರು.

ಮುಡಿಪುವಿನಲ್ಲಿ ಭಾನುವಾರ ನಡೆದ ಬೈಕ್ ರ್ಯಾಲಿ, ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ ಹಾಗೂ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಖಾದರ್ ಅವರಂತೆ ಸಾರಾಯಿ ಕೊಡುತ್ತೇವೆ, ಅಕ್ಕಿ ಕೊಡುತ್ತೇವೆ ಎಂದು ಭರವಸೆ ನೀಡದೆ ಕೇವಲ ಮೂರು ವಿಚಾರಗಳಲ್ಲಿ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂದಿದೆ. ಮೋದಿ ಎದೆಯ ಇಂಚು ತೋರಿಸಲಿಲ್ಲ, ವಿಶ್ವಕ್ಕೆ ಎದೆಗಾರಿಕೆ ತೋರಿಸಿದರು. ಆಮಿಷ, ಅವೇಶ ಇಲ್ಲದೆ ಭಯೋತ್ಪಾದನೆ ನಿಗ್ರಹ, ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ಹಾಗೂ ಕಪ್ಪು ಹಣ ನಿಯಂತ್ರಿಸುತ್ತೇವೆ ಎಂದು ಮಾತು ಕಟ್ಟಂತೆ ಸರ್ಜಿಕಲ್ ಸ್ಟ್ರೈಕ್, ಭಯೋತ್ಪಾದನೆ ನಿಗ್ರಹವಾಗಿದೆ. 2014ರಿಂದ 2018ರ ತನಕ ಈ ದೇಶದಲ್ಲಿ ಯಾವ ಮೂಲೆಯಲ್ಲಿಯೂ ಉಗ್ರಗಾಮಿ ದಾಳಿಯಾದ ಪ್ರಕರಣ ನಡೆದಿಲ್ಲ. ಕಳೆದ ನಾಲ್ಕೂವರೆ ವರ್ಷಗಳಿಂದ ಎಲ್ಲೂ ಬಾಂಬ್ ಸ್ಪೋಟವಾಗಿಲ್ಲ. ಮ್ಯಾನ್ಮಾರ್, ಪಾಕಿಸ್ತಾನಕ್ಕೆ ನುಗ್ಗಿ ಪಾಠ ಕಲಿಸಲಾಯಿತು. ಕಪ್ಪು ಹಣ ಸಂಪೂರ್ಣ ನಿಯಂತ್ರಿಸಲಾಗಿದೆ. ಅಷ್ಟಕ್ಕೂ ಮನಮೋಹನದ ಸಿಂಗ್ ಕಾಲಘಟ್ಟದಲ್ಲಿ ಉಗ್ರಗಾಮಿ ದಾಳಿ ನಡೆದಾಗ ಅವರು ಮೌನಿ ಆಗಿದ್ದರು ಎಂದು ಹೇಳಿದರು.

150ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದ ಭಾರತ ಜಗದ್ಗುರು ಆಗಬೇಕು ಎನ್ನುವ ಮಾತನ್ನು ಮೋದಿ ಯೋಗದ ಮೂಲಕ ಮಾಡಿ ತೋರಿಸಿದರು. ಇಂದು ವಿಶ್ವದ 150ರಾಷ್ಟ್ರಗಳು ವಿಶ್ವ ಯೋಗ ದಿನ ಆಚರಿಸುತ್ತಿದೆ. ಬಿಜೆಪಿಯೇತರ ಘಟಬಂಧನ್‍ನಲ್ಲಿ ದೇವೆಗೌಡರು ಪ್ರಧಾನಿ ಪಟ್ಟದ ಮೇಲೆ ಕಣ್ಣಿದ್ದು ಮಮತಾ ಬ್ಯಾನರ್ಜಿ ತುದಿಗಾಲಲ್ಲಿ ನಿಂತಿದ್ದಾರೆ. ಹಾಗಾಗಿ ಚುನಾವಣೆ ಮೊದಲೇ ಘಟನಬಂಧನ್ ತುಂಡು ತುಂಡಾಗಿ ಹೋಗ್ತದೆ ಎಂದು ನುಡಿದರು.ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಕೆ. ಸಂಜೀವ ಮಠಂದೂರು ಮಾತನಾಡಿ ಬಿಜೆಪಿಯ ಅಶ್ವಮೇಧ ಕುದುರೆ ಮುಡಿಪುವಿಂದ ಹೊರಟಿದೆ. ರಾಜ್ಯದಲ್ಲಿ ಉಸ್ತುವಾರಿ ಸಚಿವರು ತಾಕತ್ತಿದ್ದರೆ ಕುದುರೆಯನ್ನು ತಡೆದು ನಿಲ್ಲಿಸಲಿ ಎಂದು ಸವಾಲು ಹಾಕಿದ ಅವರು, ಎಂಟು ತಿಂಗಳ ಹಿಂದೆ ನಿದ್ದೆ ಮಾಡುವ ಮುಖ್ಯಮಂತ್ರಿಯನ್ನು ಕಂಡಿದ್ದು ಇದೀಗ ತಾನೊಬ್ಬ ನತದೃಷ್ಟ ಎಂದು ಆಳಲು ವ್ಯಕ್ತಪಡಿಸುವ ಮುಖ್ಯಮಂತ್ರಿ ಅಧಿಕಾರದಲ್ಲಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಮಾತನಾಡಿ ಅತ್ಯಧಿಕ ಅಲ್ಪಸಂಖ್ಯಾತರು ಇರುವ ಮಂಗಳೂರು ಕ್ಷೇತ್ರದಲ್ಲಿ ತಂದೆ ಮತ್ತು ಮಗ ಎಂಟು ಬಾರಿ ಶಾಸಕರಾಗಿದ್ದಾರೆ. ನೂರು ಬೆಡ್ ಆಸ್ಪತ್ರೆ ಇಲ್ಲದ, ಸರ್ಕಾರಿ ಕಾಲೇಜು, ಅಗ್ನಿಶಾಮಕ ದಳ, ಪಾಲಿಟೆಕ್ನಿಕ್ ಕಾಲೇಜು ಇಲ್ಲದ ಕ್ಷೇತ್ರ ಮಂಗಳೂರು. ಮೇಲ್ಸೇತುವೆ ತಡವಾದ ಕಾರಣಕ್ಕೆ ತೆಗಳುವ ಸಚಿವರು, ಕಿರು ಅವಧಿಯಲ್ಲಿ ನೇತ್ರಾವತಿ ಸೇತುವೆ ನಿರ್ಮಿಸಿದ್ದಕ್ಕೆ ಒಂದೇ ಒಂದು ಬಾರಿಯೂ ಅಭಿನಂದನೆ ಸಲ್ಲಿಸಲು ಆಗದ ಸಚಿವರು ನಮ್ಮಲ್ಲಿದ್ದಾರೆ ಎಂದು ಹೇಳಿದರು.
ಬಂಟ್ವಾಳ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿದ್ದರೂ ಅದು ಸಚಿವರಾಗಿದ್ದ ನಾಗರಾಜ ಶೆಟ್ಟಿರ ಸಾಧನೆ. ಹಾಗಾಗಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಪಕ್ಷ, ಅದು ನಾಯಕರ ಪಕ್ಷವಲ್ಲ. ಪಕ್ಷ ಸಂಘಟನೆಗೆ ದುಡಿದ ಎಲ್ಲ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸುವ ಮೂಲಕ ನಿಜಕ್ಕೂ ಅಭಿನಂದನೀಯ ಕಾರ್ಯ ಮಾಡಲಾಗಿದೆ ಎಂದರು.ಮೂಡುಬಿದಿರೆ ಶಾಸಕ ಕೆ. ಉಮನಾಥ ಕೋಟ್ಯಾನ್, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ಬಿಜೆಪಿ ಮಂಗಳೂರು ಕ್ಷೇತ್ರ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಪ್ರಧಾನ ಕಾರ್ಯದರ್ಶಿ ಮನೋಜ್ ಆಚಾರ್ಯ, ಗೋಪಾಲಕೃಷ್ಣ ಹೇರಳ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಕ್ಯಾಪ್ಷನ್ ಬೃಜೇಶ್ ಚೌಟ, ಜಿಲ್ಲಾ ಕಾರ್ಯದರ್ಶಿ ನಮಿತಾ ಶ್ಯಾಂ, ಕುರ್ನಾಡು ಶಕ್ತಿ ಕೇಂದ್ರದ ಅಧ್ಯಕ್ಷ ನವೀನ್ ಪಾದಲ್ಪಾಡಿ, ಪ್ರಧಾನ ಕಾರ್ಯದರ್ಶಿ ಲೋಹಿತ್ ಗಟ್ಟಿ ಉಪಸ್ಥಿತರಿದ್ದರು.
ಬಿಜೆಪಿ ಮುಖಂಡ ಟಿ.ಜಿ. ರಾಜಾರಾಮ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮೋದಿ ಸರಕಾರ ಮುದ್ರಾ ಯೋಜನೆಯಡಿಲ್ಲಿ 12ಕೋಟಿ ಯುವ ಜನತೆಗೆ ಸಾಲ ನೀಡಿದೆ. ಉಜ್ವಲ ಯೋಜನೆಯಡಿಯಲ್ಲಿ 6ಕೋಟಿ ಮಂದಿಗೆ ಅನಿಲ ಒದಗಿಸಿದೆ. ಕರ್ನಾಟಕ ರಾಜ್ಯ ಸರಕಾರಕ್ಕೆ ಎರಡು ಲಕ್ಷ ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಮಂಗಳೂರಿಗೆ ಸ್ಮಾರ್ಟ್ ಸಿಟಿ, ಅಮೃತ ಯೋಜನೆಯಡಿ ಯುಜಿಡಿ ಒದಗಿಸಿದೆ. ಆಯುಷ್ಮಾನ್ ಯೋಜನೆಯಲ್ಲಿ ನೂರು ದಿನಗಳಲ್ಲಿ ಒಂದು ಬಿಪಿಎಲ್ ಮನೆಗೆ ಐದು ಲಕ್ಷ ರೂ. ಗಳಂತೆ ಈಗಾಗಲೇ ಏಳು ಲಕ್ಷ ಕುಟುಂಬ ಸದುಪಯೋಗಪಡಿಸಿಕೊಂಡಿದೆ. ಪ್ಲಾಸ್ಟಿಕ್ ಪಾರ್ಕ್ ದೊಡ್ಡ ಯೋಜನೆ ಬಂದಿದೆ. ಇನ್ನು ಮಂಗಳೂರಿಗೆ ಮಿಲಿಟರಿ ಶಾಲೆ, ನವೋದಯ, ಸೆಂಟ್ರಲ್ ಸ್ಕೂಲ್ ಬರಲಿದೆ. ಬಿ.ಸಿ. ರೋಡ್ ಪೆÇಳಲಿ, ಮೆಲ್ಕಾರ್ ತೊಕ್ಕೊಟ್ಟು ರಸ್ತೆ ಚತುಷ್ಪಥ ರಸ್ತೆ ಆಗಲಿದೆ.

Exit mobile version