Site icon Ullalavani

ಹಿಟ್ ಆಂಡ್ ರನ್ : ಮಹಿಳೆ ಸಾವು

UN NETWORKS

ತೊಕ್ಕೊಟ್ಟು: ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಶನಿವಾರ ನಡೆದಿದೆ.

ರಾಣಿಪುರ ಸಂತೋಷನಗರ ನಿವಾಸಿ ದಿ. ರತ್ನಾಕರ್ ಎಂಬವರ ಪತ್ನಿ ಜಯಂತಿ (67) ಮೃತರು. ತೊಕ್ಕೊಟ್ಟು ಬ್ಯಾಂಕಿಗೆ ತೆರಳುತ್ತಿದ್ದ ಸಮಯ ರಾ.ಹೆ.66ರ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ರಸ್ತೆ ದಾಟುತ್ತಿದ್ದ ಸಮಯ ಅಪರಿಚಿತ ವಾಹನ ಢಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಿರಿಯ ಪುತ್ರ ಮಿಥುನ್ ಎಂಬವರು ಶನಿವಾರ ಬೆಳಿಗ್ಗೆ ದುಬೈ ತೆರಳುವವರಿದ್ದರು. ಅಪಘಾತ ಸಂಭವಿಸಿದಾಗ ಅವರು ಬೆಂಗಳೂರು ತಲುಪಿದ್ದು, ವಿಷಯ ತಿಳಿದು ವಾಪಸ್ಸಾಗಿದ್ದಾರೆ. ಅಪಘಾತ ನಡೆಸಿದ ವಾಹನದ ಸುಳಿವು ಸಿಸಿಟಿವಿ ಮೂಲಕ ಪತ್ತೆಯಾಗಿದ್ದು, ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಾಹನದ ಹುಡುಕಾಟ ಆರಂಭಿಸಿದ್ದಾರೆ.

Exit mobile version