UN NETWORKS
ಮುಡಿಪು: ಜನವರಿ 27 ರಂದು ಬೆಂಗಳೂರಿನ ಖುದ್ದೂಸ್ ಈದ್ಗಾ ಮೈದಾನದಲ್ಲಿ ನಡೆಯುವ ಕರ್ನಾಟಕ ಮುಸ್ಲಿಂ ಜಮಾಅತ್ ಘೋಷಣೆ ಮತ್ತು 26 ಹಾಗೂ 27ರಂದು ನಡೆಯುವ ಉಂದುಲುಸ್ ಎಸ್ಸೆಸ್ಸೆಫ್ ರಾಜ್ಯ ಪ್ರತಿನಿಧಿ ಸಮಾವೇಶದ ಪ್ರಚಾರಾರ್ಥ ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ವತಿಯಿಂದ “ಡಿವಿಶನ್ ಪಬ್ಲಿಸಿಟಿ ಕನ್ವೆನ್ಶನ್” ಮುಡಿಪುವಿನ ಮಜ್ಲಿಸ್ ಎಜ್ಯು ಪಾರ್ಕ್ ನಲ್ಲಿ ನಡೆಯಿತು.
ಮುಡಿಪು ಡಿವಿಶನ್ ಕೋಶಾಧಿಕಾರಿ ಶರೀಫ್ ಮುಡಿಪು, ಕ್ಯಾಂಪಸ್ ಕಾರ್ಯದರ್ಶಿ ಅಬೂಸ್ವಾಲಿಹ್ ಹರೇಕಳ, ಜೊತೆ ಕಾರ್ಯದರ್ಶಿ ಮೊಯ್ದಿನ್ ಮೋರ್ಲ, ಉಳ್ಳಾಲ ಡಿವಿಶನ್ ಮಾಜಿ ನಾಯಕರಾದ ಶರೀಫ್ ಸಅದಿ ಅರಫಾ, ಅಝೀಝ್ ಎಚ್‌ಕಲ್ ಹಾಗೂ ಮುಡಿಪು ಡಿವಿಶನ್ ನಾಯಕರು, ಸೆಕ್ಟರ್- ಶಾಖಾ ಪ್ರತಿನಿಧಿಗಳು ಉಪಸ್ಥಿತರಿದ್ದರು.ಡಿವಿಶನ್ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೋಳಿಕೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನೌಫಲ್ ಫರೀದ್‌ನಗರ ವಂದಿಸಿದರು.