UN NETWORKS
ಉಳ್ಳಾಲ: ಪ್ರವಾದಿ ಅವರು ಶಾಂತಿಯನ್ನು ಸಾರಿದವರು. ಆದರೆ ಅವರನ್ನು ನಿಂದಿಸುವ ಮೂಲಕ ಟಿವಿ ನಿರೂಪಕರು ಜೀತ ಪದ್ಧತಿಯನ್ನು ತೋರಿದ್ದಾರೆ ಎಂದು ದರ್ಗಾ ಅಧ್ಯಕ್ಷ ರಶೀದ್ ಹಾಜಿ ಹೇಳಿದರು.
ಯುನಿವೆಫ್ ಅಧ್ಯಕ್ಷ ರಪೀಯುದ್ದೀನ್ ಕುದ್ರೋಳಿ ಮಾತನಾಡಿ, ಉಳ್ಳಾಲ ದಲ್ಲಿ ಧರ್ಮ ಜಾಗೃತಿಯಾದರೆ ಧರ್ಮದ ದಿಕ್ಕನ್ನೆ ಬದಲಾಯಿಸುತ್ತದೆ. ರಾಜಕೀಯ ದಲ್ಲಿ ಶಾಸಕ, ಸಂಸದ ಆಗಬೇಕಾದರೆ ಸುಲಭವಾಗಿ ಮುಸ್ಲಿಮರನ್ನು ಟೀಕಿಸುತ್ತಾರೆ. ಕೆಲವು ದೃಶ್ಯ ಮಾಧ್ಯಮಗಳು ಕೇಸರಿ ಮಯವಾಗಿ ಟೀಕೆ ಮಾಡುವ ಕಾರ್ಯ ನಡೆಸುತ್ತದೆ. ಹಿಂದೂ ಧರ್ಮದವರು ನಂಬಿಕೊಂಡಿರುವ ಮಹಾಭಾರತ ಮತ್ತು ರಾಮಾಯಣ ವನ್ನು ಭಾಷಾಂತರ ಮಾಡಿದ್ದು ಮುಸ್ಲಿಮರಾಗಿದ್ದಾರೆ. ಜಹಾಂಗೀರ್ ನ ಆಡಳಿತ ಕಾಲದಲ್ಲಿ ಭಾಷಾಂತರ ಮಾಡಲಾಗಿದೆ. ಪ್ರವಾದಿಯವರುವ ಅವರಿಗೆ ಕಲ್ಲೆಸದ ಕುತ್ತಿಗೆಗೆ ಹಗ್ಗ ಬಿಗಿದ ಶತ್ರು ಗಳಿಗೂ ಕ್ಷಮೆ ನೀಡಿದ್ದರು. ಟೀಕೆ, ನಿಂದನೆ ಮಾಡುವ ಮೊದಲು ಅವರ ಚರಿತ್ರೆ ಓದಬೇಕು. ದೇಶದಲ್ಲಿ ಬದುಕುವ ಮಹಿಳೆಯರಿಗೆ ಆಸ್ತಿ ಹಕ್ಕಿದೆ ಎಂದು ಘೋಷಣೆ ಮಾಡಿದ್ದು ಪ್ರವಾದಿ ಯಾಗಿದ್ದಾರೆ. ಈ ದೇಶ ಕೆಲವರಿಗೆ ಮಾತ್ರ ಸೀಮಿತ ಆಗಬಾರದು. ನಾವು ಪ್ರೀತಿಸುವ ಪ್ರವಾದಿಯವರನ್ನು ನಿಂದಿಸಿದ ಅಜಿತ್ ಹನುಮಕ್ಕರವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು.ಇಮಾಂ ಕೌನ್ಸಿಲ್ ರಾಜ್ಯಾಧ್ಯಕ್ಷ ಜಾಫರ್ ಸಾದಿಕ್ ಫೈಝಿ ಮಾತನಾಡಿ ಅಜಿತ್ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಕೂಡಾ ಸರಕಾರ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿದ ಅವರು ಸರ್ಕಾರ ದ ಬೇಜವಾಬ್ದಾರಿ ನೀತಿಯಿಂದ ಮುಸ್ಲಿಮರು ಪ್ರತಿಭಟನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರು.
ಅನಸ್ ತಂಙಳ್ ದುವಾ ನೆರವೇರಿಸಿದರು. ಫಾರೂಕ್ ಉಳ್ಳಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.