UN NETWORKS
ಬಾಳೆಪುಣಿ: ವಿಕಲಚೇತನರು ಮನೆ ನಿರ್ಮಾಣ ಬೇಡಿಕೆ ಮುಂದಿಟ್ಟುಕೊಂಡು ಪಂಚಾಯಿತಿಗೆ ಹೋಗಬೇಕಿಲ್ಲ, ಜಿಲ್ಲಾಧಿಕಾರಿ ಮುಖಾಂತರ ಪಟ್ಟಿ ತರಿಸಿ ಮನೆ ನಿರ್ಮಿಸಿಕೊಡುವ ಯೋಜನೆ ಸರ್ಕಾರ ಹಮ್ಮಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬಾಳೆಪುಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಯೇನೆಪೆÇಯ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ವಿಜಯ ಕುಮಾರ್, ಕಣಚೂರು ವೈದ್ಯಕೀಯ ಕಾಲೇಜಿನ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್, ಎಂಸಿಎಫ್ ಮುಖ್ಯ ವ್ಯವಸ್ಥಾಪಕ ಪಿ.ಜಯಶಂಕ್ ರೈ, ವ್ಯವಸ್ಥಾಪಕ ಪಿ.ಜೆ.ರೈ, ಡಿಜಿಎಂ ಯೋಗೀಶ್, ಎಚ್.ಆರ್. ಸುರೇಶ್, ಬಂಟ್ವಾಳ ತಾಲೂಖು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸದಸ್ಯರಾದ ಹೈದರ್ ಕೈರಂಗಳ, ನವೀನ್ ಪಾದಲ್ಪಾಡಿ, ಪ್ರಶಾಂತ್ ಕಾಜವ, ಉಮ್ಮರ್ ಪಜೀರ್, ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಆಯುಶ್ ಇಲಾಖೆಯ ಇಕ್ಬಾಲ್, ಆಯುಷ್ ಫೌಂಡೇಶನ್ ಅಧ್ಯಕ್ಷ ಡಾ. ಗೋಪಾಲಕೃಷ್ಣ ನಾಯಕ್, ಫಾದರ್ ಮುಲ್ಲರ್ ಕಾಲೇಜಿನ ಪ್ರಾಂಶುಪಾಲ ಡಾ. ಶಿವಪ್ರಸಾದ್, ಕ್ಯಾನ್ಸರ್ ತಜ್ಞ ಡಾ. ರೋಹನ್ ಗಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುಂದರ ಪೂಜಾರಿ, ಕುರ್ನಾಡು ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳಾದ ಇರಾ ಗ್ರಾಮದ ಅಧ್ಯಕ್ಷ ರಝಾಕ್ ಕುಕ್ಕಾಜೆ, ಪಜೀರು ಗ್ರಾಮದ ಸೀತಾರಾಮ ಶೆಟ್ಟಿ, ಕುರ್ನಾಡು ಗ್ರಾಮದ ಶೈಲಜಾ ಮಿತ್ತಕೋಡಿ, ನರಿಂಗಾನ ಗ್ರಾಮದ ಇಸ್ಮಾಯಿಲ್‍ಮೀನಂಕೋಡಿ ಹಾಗೂ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಉಪಸ್ಥಿತರಿದ್ದರು.ಕಾರ್ಯಕ್ರಮ ಸಂಯೋಜಕಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ ಸ್ವಾಗತಿಸಿದರು. ಡಾ. ದೀಪಾ ಪ್ರಭು ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ವಿಕಲಚೇತನರಾಗಿದ್ದೂ ಸಮಾಜಕ್ಕೆ ಮಾದರಿಯಾಗಿ ಬದುಕುತ್ತಿರುವ ವಿಶೇಷ ಸಾಧಕ ವಿಕಲಚೇತನರನ್ನು ಸನ್ಮಾನಿಸಲಾಯಿತು. ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಸುಮಾರು 8000 ಮನೆಗಳನ್ನು ಆಶಾ ಕಾರ್ಯಕರ್ತರು, ಅಂಗನವಾಡಿ ಸಹಾಯಕಿಯರು, ಜನಪ್ರತಿನಿಧಿಗಳು ಸೇರಿದಂತೆ ಗ್ರಾಮ ಪಂಚಾಯತ್‍ಗಳ ಸಿಬಂದಿಗಳು ಸಂಪರ್ಕಿಸಿದ್ದು ಆರೋಗ್ಯ ಶಿಬಿರದಲ್ಲಿ ಒಟ್ಟು 2000 ಫಲಾನುಭವಿಗಳು ಭಾಗವಹಿಸಿದ್ದರು. ಇವರಲ್ಲಿ 850 ಕಣ್ಣು ಪರೀಕ್ಷೆ, 32, ಮನೋಚಿಕಿತ್ಸೆ, ಎಲುಬು ಮತ್ತು ಕೀಲು ನೋವಿಗೆ 108, ಫಿಸಿಶಿಯನ್‍ಗೆ 97, ಮಕ್ಕಓಳ ಚಿಕಿತ್ಸೆ ದಂತ ವೈದ್ಯಕೀಯ 58, ಕಿವಿ, ಮೂಗು, ಗಂಟಲು ಚಿಕಿತ್ಸೆಗೆ 97, ಆಡಿಯೋಮೆಟ್ರಿ, 18, ಕ್ಯಾನ್ಸರ್ ತಪಾಸಣೆ 65, ಎನ್‍ಸಿಡಿಗೆ 42 ಫಲಾನುಭವಿಗಳು ಚಿಕಿತ್ಸೆ ಪಡೆದಿದ್ದು, 150 ಸಂದ್ಯಾ ಸುರಕ್ಷೆ, 350 ಹಿರಿಯ ನಾಗರಿಕರು, ವಿಧವಾ ವೇತನಕ್ಕೆ 75, ಅಂಗವಿಕಲರವೇತನಕ್ಕೆ 45, ಮನಸ್ವಿನಿ ಯೋಜನೆಯಡಿ 10 ಅರ್ಜಿಗಳನ್ನು ನೊಂದಾವಣೆ ಮಾಡಿದ್ದಾರೆ.
ಎಂಸಿಎಫ್ ಪ್ರಾಯೋಜಕತ್ವದಲ್ಲಿ 25 ವೀಲ್ ಚೇಯರ್, 30 ವಾಟರ್ ಬೆಡ್, 10 ವಾಕಿಂಗ್ ಸ್ಟಿಕ್, 15 ವಾಕರ್ ಮತ್ತು 10 ಬೆಡ್ ಫ್ಯಾನ್‍ಗಳು ಮತ್ತು ಆರೋಗ್ಯ ಇಲಾಖೆಯ ವತಿಯಿಂದ 200 ಕನ್ನೆಡಕಗಳನ್ನು ವಿತರಿಸಲಾಯಿತು.