UN NETWORKS
ಉಳ್ಳಾಲ: ಯಾವುದೇ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ದೀರ್ಘ ಇತಿಹಾಸವಿರುವ ಅಳೇಕಲದ ಮದನಿ ವಿದ್ಯಾಸಂಸ್ಥೆಯ ಸಹಸ್ರಾರು ಹಳೆವಿದ್ಯಾರ್ಥಿಗಳು ಒಟ್ಟು ಸೇರಿ ವಿದ್ಯಾಸಂಸ್ಥೆಗೆ ಪೂರಕವಾಗಿ ಬಲಿಷ್ಠವಾದ ಹಳೆವಿದ್ಯಾರ್ಥಿ ಸಂಘ ಹುಟ್ಟುಹಾಕಿದ್ದು ಮಹತ್ತರ ಕೆಲಸ.
ಸಂಘದ ಗೌರವ ಸಲಹೆಗಾರ ಹಾಗೂ ನಿವೃತ್ತ ಅಧ್ಯಾಪಕ ಕಮಲಾಕ್ಷ ಮಾತನಾಡಿ ನಾಡಿನ ನಾನಾ ಭಾಗಗಳಲ್ಲಿ ನೆಲೆಸಿರುವ ಈ ಸಂಸ್ಥೆಯ ಪೂರ್ವ ವಿದ್ಯಾರ್ಥಿಗಳ ಕೂಡುವಿಕೆಯಿಂದ ಸಂಘ ಬಲಿಷ್ಠವಾಗಿದ್ದು, ಸಂಘದ ಪರವಾಗಿ ವಿದ್ಯಾ ಸಂಸ್ಥೆಗೆ ಸುಸಜ್ಜಿತ ರಂಗಮಂಟಪದ ಹಾಗೂ ಸುಮಾರು 3000 ಚದರ ಅಡಿ ಒಳಾಂಗಣಕ್ಕೆ ಇಂಟರ್ಲಾಕ್ ಅಳವಡಿಕೆ ಕಾರ್ಯವನ್ನು ಈಗಾಗಲೇ ಕೈಗೆತ್ತಿಕೊಂಡಿದ್ದು ಶೀಘ್ರದಲ್ಲೇ ಪೂರ್ಣಗೊಳಿಸಲು ಎಲ್ಲರ ನೆರವು ಅಗತ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರೌಢಶಾಲಾ ವಿಭಾಗದ ನಿವೃತ್ತ ಅಧ್ಯಾಪಕ ಶಾಹುಲ್ ಹಮೀದ್ ಮಲಾರ್ ವಹಿಸಿದ್ದರು. ಲಾಂಛನ ಬಿಡುಗಡೆ ಕಾರ್ಯವನ್ನು ನಿವೃತ್ತ ಕನ್ನಡ ಅಧ್ಯಾಪಕಿ ವೆಂಕಟೇಶ್ವರಿ ಮತ್ತು ಹಿಂದಿ ಅಧ್ಯಾಪಕಿ ಆಯಿಶಾಬಾನು ನೆರವೇರಿಸಿದರು. ಫೇಸ್ಬುಕ್ ಪೇಜನ್ನು ಹಳೆ ವಿದ್ಯಾರ್ಥಿಗಳಾದ ಅಬ್ಬಾಸ್ ಇಬ್ರಾಹಿಂ ಮಂಚಿಲ ಹಾಗೂ ರಫೀಕ್ ಕೋಟ್ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಜಯಂತಿ, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಇಬ್ರಾಹಿಂ ಪಿ., ನಿವೃತ್ತ ಅಧ್ಯಾಪಕ ಶಾಹುಲ್ ಹಮೀದ್, ಯೋಗೀಶ್ ರಾವ್, ಸರೋಜ, ಸುಜಾತ, ಲೋಕನಾಥ ರೈ, ಉಮಾವತಿ, ಇಶ್ರತ್ ಯಾಸ್ಮಿನ್ ಪೂರ್ವ ವಿದ್ಯಾರ್ಥಿಗಳಾದ ಸುರೇಖ, ರಫೀಕ್ ಹಮೀದ್, ಸಯ್ಯಿದ್ ತಾಹಿರ್ ತಮ್ಮ ಅನಿಸಿಕೆಗಳನ್ನು ಹೇಳಿದರು.
ಸಮಾರೋಪ ಭಾಷಣ ಮಾಡಿದ ಸಂಸ್ಥೆಯ ಉಪ ಪ್ರಾಂಶುಪಾಲ ಟಿ. ಇಸ್ಮಾಯಿಲ್ ನಮ್ಮೀ ಮದನಿ ವಿದ್ಯಾ ಸಂಸ್ಥೆಗೊಂದು ಪೂರ್ವವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಘ ಬೇಕೆಂಬ ಬಹು ವರ್ಷಗಳ ಕನಸು ನನಸಾಗಿದೆ ಹಾಗೂ ಇದು ಸಂಸ್ಥೆಯ ಪ್ರಗತಿಗೆ ಪೂರಕವಾಗುವುದರಲ್ಲಿ ಸಂಶಯವಿಲ್ಲ.ಎಲ್ಲಾ ಅಧ್ಯಾಪಕರು ಸಂಘದೊಂದಿಗೆ ಎಲ್ಲಾ ರೀತಿಯಲ್ಲೂ ಸಹಕಾರಿಸುವರು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಇಬ್ರಾಹಿಂ ಕಾಸಿಂ, ಕಾರ್ಯದರ್ಶಿ ಪಂಡಿತ್ ಮುಹಮ್ಮದ್, ಸಂಚಾಲಕರಾದ ಯು.ಎನ್ ಇಬ್ರಾಹಿಂ, ಜೊತೆ ಕಾರ್ಯದರ್ಶಿ ಎ.ಎ ಖಾದರ್, ಸದಸ್ಯರಾದ ಯು.ಎನ್ ಅಹಮದ್, ಯು,ಎ ಬಾವ ಉಪಸ್ಥಿತರಿದ್ದರು. ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿ ಶಫೀಕ್ ಕಲ್ಕಟ್ಟ ಸಂಘದ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿವೃತ್ತ ಅಧ್ಯಾಪಕರು ಹಾಗೂ ಪ್ರಸಕ್ತ ಅಧ್ಯಾಪಕರಿಗೆ ಹೂಗುಚ್ಛ ನೀಡಿ ವಿಶೇಷವಾಗಿ ಗೌರವಿಸಲಾಯಿತು.
ಪೂರ್ವ ವಿದ್ಯಾರ್ಥಿಗಳಾದ ರಾಜೇಶ್ ಗಟ್ಟಿ ಪಿಲಾರು ಸ್ವಾಗತಿಸಿ, ನಿರೂಪಿಸಿದರು. ಸಂಘದ ಸಂಘಟನಾ ಕಾರ್ಯದರ್ಶಿ ಮಂಗಳೂರಿನ ರಿಯಾಝ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ| ಸಂಗೀತ ವಂದಿಸಿದರು.