UN NETWORKS
ಉಳ್ಳಾಲ: ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಮಸ್ಜಿದ್‍ನ ಖತೀಬರು, ಮದರಸ ಸದರ್‍ಮುಅಲ್ಲಿಂಗಳಿಗೆ ಹಾಗೂ ಅಧ್ಯಕ್ಷರುಗಳಿಗೆ ವಿಚಾರಗೋಷ್ಠಿಯೊಂದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ದಕ್ಷಿಣ ವಲಯ, ಉಳ್ಳಾಲ ಕೇಂದ್ರ ಜುಮಾಮಸ್ಜಿದ್‍ಮತ್ತು ಸಯ್ಯದ್ ಮದನಿ ಅರೆಬಿಕ್ ಟ್ರಸ್ಟ್,ಹಾಗೂ ಜಮಿಯತ್ತುಲ್ ಫಲಾಹ್ ಮಂಗಳೂರು ತಾಲೂಕು ಸಮಿತಿಯು ಸಯ್ಯಿದ್‍ಮದನಿ ಸಭಾಂಗಣದಲ್ಲಿ ಜಂಟಿಯಾಗಿ ಆಯೋಜಿಸಿತು.
ಮುಖ್ಯ ಅತಿಥಿಗಳಾಗಿ ಮಂಗಳುರು ಜಮಿಯ್ಯತ್ತುಲ್ ಫಲಾಹ್ ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಚಾಲ್, ಉಳ್ಳಾಲ ಕೇಂದ್ರ ಜುಮಾಮಸ್ಜಿದ್ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹಾ ಕ್ಷೇತ್ರ ಸಮನ್ವಯಾಧಿಕಾರಿ ಡಾ|| ಪ್ರಶಾಂತ್, ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್‍ನ ಉಪಾಧ್ಯಕ್ಷರಾದ ಮುಸ್ತಫಾ ಅಬ್ದುಲ್ಲಾ, ಅರೇಬಿಕ್ ಟ್ರಸ್ಟ್ ನ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್‍ನ ಆಡಳಿತಾಧಿಕಾರಿ ಜನಾಬ್ ಅಬ್ದುಲ್ ಲತೀಫ್ ಶಿಕ್ಷಣ ಸಂಯೋಜಕಿ ಜ್ಯೋತಿ,ಉಳ್ಳಾಲ ವಲಯದ ಪ್ರೌಢಶಾಲಾ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು. ಜಮೀಯ್ಯತ್ತುಲ್ ಫಲಾಹ್‍ನ ಕೋಶಾಧಿಕಾರಿ ಕೆ.ಎಂ.ಕೆ. ಮಂಜನಾಡಿ ಸ್ವಾಗತಿಸಿ ಕಾರ್ಯದರ್ಶಿ ಎಂ.ಹೆಚ್ ಮಲಾರ್ ವಂದಿಸಿದರು.ಸಲಾಂ ಉಸ್ತಾದ್ ಕಾರ್ಯಕ್ರಮ ನಿರೂಪಿಸಿದರು.