UN NETWORKS
ಕೈರಂಗಳ: ಬಂಟ್ವಾಳ ತಾಲೂಕಿನ ಕೈರಂಗಳದ ಶಾರದಾಗಣಪತಿ ವಿದ್ಯಾಕೇಂದ್ರದಲ್ಲಿ ಶಾರದೋತ್ಸವ ನಡೆಯಿತು. ಸಂಸ್ಥೆಯ ಮಾರ್ಗದರ್ಶಕ ಪಿ. ಶಂಕರ ಭಟ್ ಧ್ವಜಾರೋಹಣಗೈದರು.ಶಾರದೋತ್ಸವ ಪ್ರಯುಕ್ತ ನಡೆದ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯ ಬಹುಮಾನ ವಿತರಣೆಯನ್ನು ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯ ನಂದರಾಜ್ ಶೆಟ್ಟಿ ನಡೆಸಿಕೊಟ್ಟರು.
ವಾರ್ಷಿಕೋತ್ಸವದಲ್ಲಿ ಟಿ. ಎಸ್. ಉದಯಕುಮಾರ್ ಭಟ್ ಅಧ್ಯಕ್ಷತೆ ವಹಿಸಿದರು. ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಕಡಂದಲೆ ಸುರೇಶ್ ಭಂಡಾರಿ, ಬಾಲಕೃಷ್ಣ ಭಂಡಾರಿ, ಸಂತೋಷ್ ಕುಮಾರ್ ರೈ ಬೋಳಿಯಾರು, ಹೈದರ್ ಕೈರಂಗಳ, ಲೀಲಾವತಿ ಭಾಸ್ಕರ್, ಪಿ. ನಾಗರಾಜ ಭಟ್, ಟಿ. ಕೃಷ್ಣ ಭಟ್, ಬಾಲಕೃಷ್ಣ ರೈ ಮುಂಡಾಜೆ, ಎ. ಮಂಜುನಾಥ ಪೈ, ಎ. ಕಿರಣ್‍ದಾಸ್, ಕರುಣಾಕರ, ಲಕ್ಷ್ಮೀಶ ಕೆ. ಪಿ, ಎಂ. ಸೋಮಶೇಖರ್, ಸಾಗರ್ ಪಿ., ಶಾಲಾ ವಿದ್ಯಾರ್ಥಿ ನಾಯಕ ಪ್ರದೀಪ್ ಕುಮಾರ್, ಯೋಗೇಶ್ವರಿ ಪಿ. ಘೋರೆ, ಶಮನ್ ಎಂ. ಹಾಗೂ ಹೃತಿಕಾ ಉಪಸ್ಥಿತರಿದ್ದರು.
ಸಂಸ್ಥೆಯ ಸಂಚಾಲಕ ಟಿ. ಜಿ. ರಾಜಾರಾಮ ಭಟ್ ಸ್ವಾಗತಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಿನ್ಸಿಪಾಲ್ ದಿವ್ಯದೀಪ ವಂದಿಸಿದರು. ಸಹಶಿಕ್ಷಕ ಶ್ರೀನಿವಾಸ ಭಟ್ ಸೇರಾಜೆ ಹಾಗೂ ಸಹಶಿಕ್ಷಕಿ ಯೋಗಿತಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳಿಂದ ಜಾನಪದ ಹಾಗೂ ಶಾಸ್ತ್ರೀಯ ನೃತ್ಯ, ದೇಶಭಕ್ತಿ ನೃತ್ಯಗಳು, ಕರಾಟೆ, ಯೋಗಾಸನ ಪ್ರದರ್ಶನಗಳು, ರೂಪಕ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಿತು.