UN NETWORKS
ಉಳ್ಳಾಲ: ರಾಜ್ಯದ ಅಭಿವೃದ್ಧಿ ಝೀರೋ ಆಗಿದೆ. ವಿಧಾನಸೌಧದಲ್ಲಿ ಸಚಿವರುಗಳ ಆಪ್ತರ ಜತೆಗೆ ನಿರಂತರ ಲಕ್ಷ ಹಣದ ಕಂತೆಗಳು ಸಾಗುತ್ತಲೇ ಇದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯದ ಸಮ್ಮಿಶ್ರ ಸರಕಾರ ಮುಖ್ಯಮಂತ್ರಿ ಹಾಗೂ ಸಚಿವರುಗಳು ಶೀಘ್ರವೇ ರಾಜೀನಾಮೆ ನೀಡಬೇಕು ಎಂದು ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದರು.
ಮಾಜಿ ಶಾಸಕ ಜಯರಾಮ ಶೆಟ್ಟಿ ಮಾತನಾಡಿ ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಕಾಂಗ್ರೆಸ್. ಅಂದಿನ ನೆಹರೂ ಕಾಲದಿಂದ ಇಂದಿನವರೆಗೂ ಕಾಂಗ್ರೆಸ್ ಹಲವು ರೀತಿಯಲ್ಲಿ ಭ್ರಷ್ಟಾಚಾರವನ್ನು ನಡೆಸುತ್ತಲೇ ಬಂದಿದೆ. ವಿಧಾನಸಭಾ ಆವರಣದಲ್ಲಿ ದೊರೆತ ಲಕ್ಷಾಂತರ ಹಣದ ಮಾಹಿತಿಯನ್ನೇ ನೀಡಲಾಗದ ನಾಲಾಯಕ್ ಸರಕಾರ ಇದಾಗಿದೆ. 20 ವರ್ಷಗಳಿಂದ ಅಪ್ಪ-ಮಗನ ಆಡಳಿತವಿರುವ ಮಂಗಳೂರು ಕ್ಷೇತ್ರದಲ್ಲಿ ಸರಿಯಾದ ಚರಂಡಿ ಕಾಮಗಾರಿಯನ್ನು ಪೂರೈಸಲು ಸಾಧ್ಯವಾಗಿಲ್ಲ. ಆದರೂ ಫ್ಲೈಓವರ್ ಕಾಮಗಾರಿ ಬಗ್ಗೆ ಸಚಿವ ಖಾದರ್ ಅವರಿಗೆ ಮಾತುಗಳನ್ನಾಡಲು ನೈತಿಕತೆಯಿಲ್ಲ ಎಂದರು.ಬಿಜೆಪಿ ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಸಿಂಗಾಪುರಕ್ಕೆ ಮುಖ್ಯಮಂತ್ರಿ ಕುಟುಂಬ ಪ್ರವಾಸ ಹೋಗಿರುವುದರ ಖರ್ಚಿನ ವೆಚ್ಚ ಭರಿಸುವ ಸಲುವಾಗಿ ತೈಲ ಬೆಲೆಯನ್ನು ಏರಿಕೆ ಮಾಡಲಾಗಿದೆ. ಫ್ಲೈಓವರ್ ಕಾಮಗಾರಿ ಆರಂಭದಲ್ಲೇ ಕಾಲಿನಲ್ಲಿ ತಡೆಗೋಡೆಗಳನ್ನು ತುಳಿದು ಕಾಮಗಾರಿಯ ಚಿತ್ರಣ ಬದಲಾಯಿಸುವಂತೆ ಮಾಡಿ ವಿಳಂಬ ನಡೆಸಲು ಕಾರಣರಾದ ಸಚಿವ ಯು.ಟಿ.ಖಾದರ್ ಅವರ ಬೆಂಬಲಿಗರೇ ತೊಕ್ಕೊಟ್ಟು ಫ್ಲೈಓವರ್ ಅನ್ನು ಅಣುಕು ಮೂಲಕ ಉದ್ಘಾಟಿಸುತ್ತಿರುವುದು ನಾಚಿಕೆಗೇಡು ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಜಿಲ್ಲಾ ಸಮಿತಿ ಸದಸ್ಯ ಚಂದ್ರಶೇಖರ್ ಉಚ್ಚಿಲ್, ರಾಜ್ಯ ಸಮಿತಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಡಲ ಉಪಾಧ್ಯಕ್ಷ ಯಶವಂತ ಅಮೀನ್, ಹರಿಯಪ್ಪ ಸಾಲ್ಯಾನ್, ಪ್ರಕಾಶ್ ಸಿಂಫೊನಿ ಕಾರ್ಯದರ್ಶಿಗಳಾದ ಮನೋಜ್ ಆಚಾರ್ಯ, ಮೋಹನ್ ರಾಜ್ ಕೆ. ಆರ್. ಕಾರ್ಯದರ್ಶಿ ಹೇಮಂತ್ ಶೆಟ್ಟಿ ದೇರಳಕಟ್ಟೆ, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಕೌನ್ಸಿಲರ್ ಗಳಾದ ನಮಿತಾ ಗಟ್ಟಿ, ಗೀತಾ ಬಾಯಿ, ರಾಜೇಶ್ ಯು.ಬಿ. ಮಮತಾ ಮೊಗವೀರಪಟ್ಣ, ಜಿಲ್ಲಾಮಹಿಳಾ ಮೋರ್ಚಾ ಕಾರ್ಯದರ್ಶಿ ರಾಜೀವಿ ಕೆಂಪುಮಣ್ಣು, ಲಲಿತಾ ಸುಂದರ್, ತಾ.ಪಂ. ಸದಸ್ಯರಾದ ರವಿಶಂಕರ್ ಸೋಮೇಶ್ವರ, ನವೀನ್ ಪಾದಲ್ಪಾಡಿ, ಜಿಲ್ಲಾ ಹಿಂದುಳಿದ ವರ್ಗಗಳ ಪ್ರ. ಕಾರ್ಯದರ್ಶಿ ದೇವದಾಸ್ ಕೊಲ್ಯ, ಕೋಟೆಕಾರು ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಭಾರತೀ ರಾಘವ ಗಟ್ಟಿ, ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್, ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು, ಕುರ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಿತಿನ್ ಗಟ್ಟಿ ಕುರ್ನಾಡು, ಮುಖಂಡರಾದ ಸೀತಾರಾಮ ಬಂಗೇರ, ಸಂಜೀವ ಶೆಟ್ಟಿ ಅಂಬ್ಲಮೊಗರು, ಸುರೇಶ್ ಅಂಬ್ಲಮೊಗರು, ಸುರೇಂದ್ರ ಶೆಟ್ಟಿ, ಮೋಹನ್ ದಾಸ್ ಕಿನ್ಯ, ಮೋಹನ್ ಶೆಟ್ಟಿ ಕುಂಪಲ, ಪ್ರಶಾಂತ್ ಕಾಪಿಕಾಡು, ಅಜಿತ್ ಉಳ್ಳಾಲ್, ಗಿರೀಶ್ ಕೊಟ್ಟಾರಿ, ಯಶವಂತ್ ಆಳ್ವ, ಹರೀಶ್ ಅಂಬ್ಲಮೊಗರು, ಪುರುಷೋತ್ತಮ ಗಟ್ಟಿ, ., ಹರೀಶ್ ಭಂಡಾರಬೈಲು ಮುಂತಾದವರು ಉಪಸ್ಥಿತರಿದ್ದರು.