ಜಮಾಅತೆ ಇಸ್ಲಾಮಿ ವತಿಯಿಂದ ರೋಗಿಗಳಿಗೆ, ವಿದ್ಯಾರ್ಥಿಗಳಿಗೆ ನೆರವು
UllalaVani
UN NETWORKS
ತೊಕ್ಕೊಟ್ಟು: ಜಮಾಅತೆ ಇಸ್ಲಾಮಿ ಹಿಂದ್ ಸಾಮಾಜಿಕ ಸೇವಾ ಘಟಕ ಉಳ್ಳಾಲ ಇದರ ಆಶ್ರಯದಲ್ಲಿ ಕರ್ನಾಟಕ ವಕ್ಫ್ ಇಲಾಖೆ ಅಲ್ಪಶಂಖ್ಯಾತರ ಆರೋಗ್ಯ ಪರಿಹಾರ ನಿಧಿಯಿಂದ ರೋಗಿಗಳಿಗೆ ಧನ ಸಹಾಯ ಮತ್ತು 23 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವ ಕಾರ್ಯಕ್ರಮ ತೊಕ್ಕೊಟ್ಟುವಿನ ಜಮಾಅತೆ ಇಸ್ಲಾಮಿ ಹಿಂದ್ ಕಚೇರಿಯಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಸ್ಥಾನೀಯ ಘಟಕ ಅಧ್ಯಕ್ಷ ಅಬ್ದುಲ್ ಕರೀಂ ಮಾತನಾಡಿ ಬಡವರಿಗೆ, ರೋಗಿಗಳಿಗೆ ಆರ್ಥಿಕ ನೆರವು ನೀಡುವುದು ಉತ್ತಮ ಯೋಜನೆ. ಕಷ್ಟದಲ್ಲಿ ರುವವರಿಗೆ ನೆರವು ಆಗಬೇಕೆಂಬ ಉದ್ದೇಶದಿಂದ ಹಮ್ಮಿಕೊಂಡಿದ್ದೇವೆ. ಇದನ್ನು ಎಲ್ಲರೂ ಸದುಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.ಈ ಸಂದರ್ಭ ಕರ್ನಾಟಕ ವಕ್ಫ್ ಇಲಾಖೆ ಅಲ್ಪಶಂಖ್ಯಾತರ ಆರೋಗ್ಯ ಪರಿಹಾರ ನಿಧಿಯಿಂದ ತೃತೀಯ ಹಂತದ 125 ರೋಗಿಗಳಿಗೆ ಒಟ್ಟು 32,55000 ರೂ. ನೆರವು ಮತ್ತು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ 23 ವಿದ್ಯಾರ್ಥಿಗಳಿಗೆ 53000 ರೂ. ಶೈಕ್ಷಣಿಕ ನೆರವು ನೀಡಲಾಯಿತು.