Site icon Ullalavani

ಕೊಲ್ಲರಕೋಡಿ:’ಸ್ವಚ್ಛ ನರಿಂಗಾನ’ ಕಾರ್ಯಕ್ರಮ

UN NETWORKS

ಕೊಲ್ಲರಕೋಡಿ: ನರಿಂಗಾನ ಗ್ರಾಮ ಪಂಚಾಯತ್ ವತಿಯಿಂದ ಮತ್ತು ರಾಮಕೃಷ್ಣ ಮಿಷನ್ ಮಂಗಳೂರು ಹಾಗೂ ದ.ಕ. ಜಿಲ್ಲಾ ಪಂಚಾಯತ್ ಇದರ ಸಹಯೋಗದೊಂದಿಗೆ ‘ಸ್ವಚ್ಛ ನರಿಂಗಾನ’ ಕಾರ್ಯಕ್ರಮವು ನರಿಂಗಾನ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಖಾದರ್ ಅವರ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕೊಲ್ಲರಕೋಡಿಯ ನಾಗರಿಕರು ಜೊತೆಗೂಡಿ ಕೊಲ್ಲರಕೋಡಿಯ ಮುರತಂಗುಡಿ ತೋಡಿನ ತ್ಯಾಜ್ಯಗಳನ್ನು ಮತ್ತು ರಸ್ತೆಬದಿಯ ಗಿಡ ಗಂಟುಗಳನ್ನು ಕಡಿದು ಸ್ವಚ್ಛ ಗೊಳಿಸಿದರು.ಈ ಸಂದರ್ಭ ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಉಪಾಧ್ಯಕ್ಷೆ ನಳಿಣಾಕ್ಷಿ, ನೂರುಲ್ ಹುದಾ ಮಸ್ಜಿದ್ ತಖ್ವಾ ಅಧ್ಯಕ್ಷ ಇಬ್ರಾಹಿಂ ಪಾರೆ, ಕಾರ್ಯದರ್ಶಿ ಲತೀಫ್ ಎಮ್.ಎಚ್, ಗ್ರಾಪಂ ಸದಸ್ಯ ಸಿ. ಎಚ್. ರಹಿಮಾನ್ ಚಂದಹಿತ್ತುಲು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಜನಿ .ಡಿ, ಗ್ರಾಪಂ ಸದಸ್ಯೆ ಸುಜಾತ, ಗ್ರಾಪಂ ಸಿಬ್ಬಂದಿ ಖಾಸಿಂ, ಮುಹಮ್ಮದ್ ಎನ್.ಐ, ರಫೀಕ್ ಎಮ್. ಜಿ, ಅಶ್ರಫ್ ಮೀನಂಕೋಡಿ ಮೊದಲಾದವರು ಉಪಸ್ಥಿತರಿದ್ದರು.

Exit mobile version