UN NETWORKS
ಬಾಳೆಪುಣಿ: ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಸಮಾಜದಲ್ಲಿ ಸೇವೆಯ ಅಗತ್ಯವಿರುವ ಭಾಗದಲ್ಲಿ ತನ್ನ ಸಹಾಯ ಹಸ್ತ ಚಾಚುವ ಆದರ್ಶ ಪಾಲನೆಯ ಮೂಲಕ ಸಶಕ್ತ ಸಂಘಟನೆಯಾಗಿ ಬೆಳೆದಿದೆ ಎಂದು ಲಯನ್ಸ್ ಜಿಲ್ಲೆ 317-ಡಿಯ ಗವರ್ನರ್ ದೇವದಾಸ ಭಂಡಾರಿ ಹೇಳಿದರು.
ಕೈರಂಗಳದ ಶಾರದಾಗಣಪತಿ ವಿದ್ಯಾಕೇಂದ್ರದ ಟಿ. ಜಿ. ರಾಜಾರಾಮ ಭಟ್ ಮಾತನಾಡಿ ಮನುಷ್ಯ ಜೀವಿತದ ಕೊನೆಯ ನಿಲ್ದಾಣವಾಗಿರುವ ರುದ್ರಭೂಮಿ, ಇಂದಿನ ಸಮಾಜದಲ್ಲಿ ಅತ್ಯಗತ್ಯವಾಗಿದ್ದು, ಇದನ್ನು ಕೊಡಮಾಡುವಲ್ಲಿ ಗ್ರಾಮದ ಜನರೊಂದಿಗೆ ಕೈ ಜೋಡಿಸಿದ ಲಯನ್ಸ್ ಪ್ರಾಂತ್ಯಾಧ್ಯಕ್ಷ ಪ್ರವೀಣ್ ಶೆಟ್ಟಿಯವರ ಕೊಡುಗೆ ಮಹತ್ವವಾದುದು, ಈ ಕಾರ್ಯಕ್ಕೆ ಶ್ರಮಿಸಿದ ಎಲ್ಲ ಸ್ಥಳೀಯ ಸಂಘ ಸಂಸ್ಥೆಗಳ ಸೇವೆಯನ್ನು ಶ್ಲಾಘಿಸಿದರು. ಲಯನ್ಸ್ ಪ್ರಾಂತ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ತಾನು ಹುಟ್ಟಿ ಬೆಳೆದು ಬದುಕು ರೂಪಿಸಿಕೊಂಡ ಈ ಹಳ್ಳಿಗೆ ಇದು ತನ್ನ ಸಮಾಜಕ್ಕೆ ನೀಡುವ ಕೊಡುಗೆಯಾಗಿದ್ದು, ಋಣ ಸಂದಾಯ ಅಸಾಧ್ಯವಾದರೂ ಈ ಮೂಲಕ ಕಿಂಚಿತ್ ಸಮಾಧಾನ ಹೊಂದಿದ ಭಾವನೆ ನಮ್ಮದು ಎಂಬ ಭಾವದೊಂದಿಗೆ ಈ ಕೊಡುಗೆ ನೀಡುತ್ತಿದ್ದೇವೆ ಎಂದರು.
ಹಿಂದೂ ರುದ್ರಭೂಮಿ ಸಮಿತಿಯ ಅಧ್ಯಕ್ಷ ಮಹೇಶ್ ಚೌಟ ಸ್ವಾಗತಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ಹಿಂದೂ ರುದ್ರ ಭೂಮಿ ಸಮಿತಿಯ ಗೌರವಾಧ್ಯಕ್ಷ ಕೆ. ಐ. ಕೇಶವ ಭಟ್, ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರೀಮತಿ ಮೋಹಿನಿ, ತಾಲೂಕು ಪಂಚಾಯಿತಿ ಸದಸ್ಯರಾದ ಹೈದರ್ ಕೈರಂಗಳ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್, ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಬಾಲಕೃಷ್ಣ ಹೆಗಡೆ, ಕೋಶಾಧಿಕಾರಿ ಶ್ರೀನಾಥ್ ಕೊಂಡೆ ಹಾಗೂ ಗಿರೀಶ್ ಬೆಳ್ಳೇರಿ ಉಪಸ್ಥಿತರಿದ್ದರು.
ಕೆ. ಭಾಸ್ಕರ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಶಾಂತ ಪೈ ವಂದಿಸಿದರು.