Site icon Ullalavani

ಶಕ್ತಿನಗರ: ಸಾನಿಧ್ಯದಲ್ಲಿ ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕಲದಿಂದ “ಸಂಭ್ರಮ’ ಕಾರ್ಯಕ್ರಮ

UN NETWORKS

ಶಕ್ತಿನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಉಳ್ಳಾಲ ಮಂತ್ರ ನಾಟ್ಯಕಲಾ ಗುರುಕುಲದಿಂದ ಶಕ್ತಿನಗರದ ಸಾನಿಧ್ಯ ಭಿನ್ನ ಸಾಮಥ್ರ್ಯದ ಮಕ್ಕಳ ವಸತಿ ಶಾಲೆಯಲ್ಲಿ “ಸಂಭ್ರಮ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮಕ್ಕೆ ಮುಡಿಪು ವಿಶ್ವಕರ್ಮ ಸಂಘದ ಅಧ್ಯಕ್ಷ ಇರಾ ಯೋಗೀಶ್ ಆಚಾರ್ಯ ಚಾಲನೆ ನೀಡಿದರು. ಸಾನಿಧ್ಯ ಭಿನ್ನ ಸಾಮಥ್ರ್ಯದ ಮಕ್ಕಳ ವಸತಿ ಶಾಲೆ ಹಾಗೂ ತರಬೇತಿ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶ್ರೀ ಗಣೇಶ್ ಸೇವಾ ಟ್ರಸ್ಟ್‍ನ ಉಪಾಧ್ಯಕ್ಷ ಎಮ್. ದೇವದತ್ತ ರಾವ್, ವೇಣುಗೋಪಾಲ್ ಯು. ಭಟ್ನಗರ, ಮಂತ್ರ ನಾಟ್ಯಕಲಾ ಗುರುಕುಲ ಅಧ್ಯಕ್ಷ ಶಕೀಲಾ ಜನಾರ್ಧನ, ಅಧ್ಯಕ್ಷೆ ಶಕೀಲಾ ಜನಾರ್ಧನ್, ಟ್ರಸ್ಟಿಗಳಾದ ಶೈನಾ ಶ್ರಾವಣ್ ಉಳ್ಳಾಲ್, ಬಬಿತಾ ಕಿರಣ್ ಉಳ್ಳಾಲ್ ಉಪಸ್ಥಿತರಿದ್ದರು.

ನಿರ್ದೇಶಕ ಶ್ರಾವಣ್ ಉಳ್ಳಾಲ್ ಸ್ವಾಗತಿಸಿದರು. ಕಾರ್ಯದರ್ಶಿ ಕಿರಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

Exit mobile version