Site icon Ullalavani

ಸಿಡಿಲು ಬಡಿದು ಕೆದುಂಬಾಡಿ ಮಸೀದಿಗೆ ಹಾನಿ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಇಲ್ಲಿಗೆ ಸಮೀಪದ ಕೆದುಂಬಾಡಿಯ ಜುಮ್ಮಾ ಮಸೀದಿಗೆ ಸಿಡಿಲು ಬಡಿದು ಮಸೀದಿಯ ಮಿನಾರ, ವಿದ್ಯುತ್, ಧ್ವನಿವರ್ದಕ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಶನಿವಾರ ರಾತ್ರಿ ವೇಳೆ ಬಂದ ಸಿಡಿಲು ಮಳೆಯ ವೇಳೆ ಬಡಿದ ಸಿಡಿಲು ಕೆದುಂಬಾಡಿಯ ಮಸೀದಿಗೆ ಬಿದ್ದಿದೆ.

ಈ ವೇಳೆ ಮಸೀದಿಯಲ್ಲಿ ಯಾರೂ ಇರದಿದ್ದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಮಸೀದಿಯ ಮಿನಾರಕ್ಕೆ ಹಾನಿಯಾಗಿದೆ. ಧ್ವನಿವರ್ದಕ, ವಿದ್ಯುತ್ ವಯರ್, ಇನ್‍ವರ್ಟರ್, ಜನರೇಟರ್ ಕೆಟ್ಟುಹೋಗಿದೆ. ವಿದ್ಯುತ್ ವಯರ್ ಸುಟ್ಟು ಅಪಾರ ನಷ್ಟ ಸಂಭವಿಸಿದೆ.

Exit mobile version