Site icon Ullalavani

ತೊಕ್ಕೊಟ್ಟು : ಊಟದ ಹಣ ಕೇಳಿದ್ದಕ್ಕೆ ಕ್ಯಾಂಟೀನ್‌ಗೆ ಬೆಂಕಿ ಹಚ್ಚಿದರು!

UN NETWORKS

ತೊಕ್ಕೊಟ್ಟು: ಕ್ಯಾಂಟೀನ್‌ನಲ್ಲಿ ಊಟ ಮಾಡಿದ ಬಳಿಕ ಅದರ ಮಾಲಕ ಹಣ ಕೇಳಿದಕ್ಕೆ ತಂಡವೊಂದು ಕ್ಯಾಂಟೀನ್‌ಗೇ ಬೆಂಕಿ ಹಚ್ಚಿದ ಘಟನೆ ತೊಕ್ಕೊಟ್ಟು ಸಮೀಪ ಕಾಪಿಕಾಡ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ.

ಉಳ್ಳಾಲ ಹಳೆಕೋಟೆಯ ಅಬೀದ್ ಎಂಬವರಿಗೆ ಸೇರಿದ ಕಾಪಿಕಾಡಿನಲ್ಲಿರುವ ಕ್ಯಾಂಟಿನ್‌ನಲ್ಲಿ ಈ ಘಟನೆ ನಡೆದಿದೆ. ಬೆಂಕಿಯಿಂದ ಕ್ಯಾಂಟೀನ್ ಭಾಗಶ: ಹಾನಿಗೀಡಾಗಿದೆ. ಕುಂಪಲ ನಿವಾಸಿ ರವೂಫ್ ಹಾಗೂ ತಂಡ ಈ ಕೃತ್ಯ ಎಸಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ವಿವರ: ಕುಂಪಲ ನಿವಾಸಿ ರವೂಫ್ ಮತ್ತು ಆತನ ತಂಡ ನಿನ್ನೆ ರಾತ್ರಿ ಕ್ಯಾಂಟೀನ್‌ಗೆ ಆಗಮಿಸಿ ಹೊಟ್ಟೆ ತುಂಬ ಊಟ ಮಾಡಿದ್ದರೆನ್ನಲಾಗಿದೆ. ಬಳಿಕ ಊಟದ ಬಿಲ್ ಕೊಡದೆ ಜಾಗ ಖಾಲಿ ಮಾಡಲು ಮುಂದಾದರು ಎನ್ನಲಾಗಿದೆ. ಈ ಸಂದರ್ಭ ಕ್ಯಾಂಟೀನ್ ಮಾಲಕ ಹಣ ನೀಡುವಂತೆ ಕೇಳಿದ್ದಾರೆ. ಇದರಿಂದ ಕೋಪಗೊಂಡ ತಂಡ ಕ್ಯಾಂಟೀನ್‌ಗೆ ಬೆಂಕಿ ಹಚ್ಚಿದೆ ಎಂದು ದೂರಲಾಗಿದೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version