Site icon Ullalavani

ಪ್ರವಾದಿ ರನ್ನು ನಿಂದಿಸಿದ ಖಾಸಗಿ ಚಾನಲ್ ನಿರೂಪಕ ಅಜಿತ್ ಹನುಮಕ್ಕನ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

UN NETWORKS

ಕೋಟೆಕಾರ್: ಎಸ್ ವೈ ಎಸ್ ಕೆ ಸಿ ರೋಡ್ ಸೆಂಟರ್,ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಹಾಗೂ ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ವತಿಯಿಂದ ಪ್ರವಾದಿ(ಸ.ಅ) ರನ್ನು ನಿಂದಿಸಿ ಅವಹೇಳನಕಾರಿ ಹೇಳಿಕೆ ನೀಡಿ ಸಮಾಜದ ಸಾಮರಸ್ಯ ಕದಡಲು ಯತ್ನಿಸಿ ಧಾರ್ಮಿಕ ಭಾವನೆಗೆ ದಕ್ಕೆ ತಂದ ಸುವರ್ಣ ಚಾನಲ್ ನಿರೂಪಕ ಅಜಿತ್ ಹನುಮಕ್ಕನ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಜ.01 ರಂದು ಕೆ.ಸಿ.ರೋಡ್ ಜಂಕ್ಷನ್ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಅಲ್ ಮುಬಾರಕ್ ಜುಮಾ ಮಸೀದಿ ಖತೀಬರಾದ ಮುನೀರ್ ಸಖಾಫಿ ಉಸ್ತಾದರು ದುವಾ ನೆರವೇರಿಸಿದರು. ಯಾಸೀನ್ ಸಖಾಫಿ ಕಾರ್ಯಕ್ರಮ ಉದ್ಘಾಟನೆಗೈದರು. SSF ಉಳ್ಳಾಲ ಡಿವಿಜನ್ ಅಧ್ಯಕ್ಷರಾದ ಮುನೀರ್ ಸಖಾಫಿ ಮುಖ್ಯ ಪ್ರಭಾಷಣಗೈದರು. ಸಲಾಂ ಉಚ್ಚಿಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರತಿಭಟನೆ ಬಳಿಕ ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿ ಅಜಿತ್ರನ್ನು ಬಂದಿಸಬೇಕೆಂದು ಕೋರಿ SYS ಹಾಗು SSF ಸಂಘಟನೆಗಳಿಂದ ದೂರು ದಾಖಲಿಸಲಾಯಿತು.

ಪ್ರತಿಭಟನೆಯಲ್ಲಿ ಎಸ್ ವೈ ಎಸ್ ಕೆ ಸಿ ರೋಡ್ ಸೆಂಟರ್ ಅಧ್ಯಕ್ಷರಾದ ಉಮರ್ ಮಾಸ್ಟರ್, ಎಸ್ ವೈ ಎಸ್ ಕೆ ಸಿ ರೋಡ್ ಸೆಂಟರ್ ಪ್ರ ಕಾರ್ಯದರ್ಶಿ ಫಾರೂಖ್ ಬಟ್ಟಪ್ಪಾಡಿ,ಕೋಶಾಧಿಕಾರಿಯಾದ ಉಸ್ಮಾನ್ ಪಲ್ಲ, SJM ದ.ಕ ಜಿಲ್ಲಾಧ್ಯಕ್ಷರಾದ ಪಿ. ಎಂ. ಮುಹಮ್ಮದ್ ಮದನಿ ಉಸ್ತಾದ್, ಅಬ್ದುಲ್ಲಾ ಮದನಿ,ಅಝೀಝ್ ಸಅದಿ ಅಫ್ಲಳಿ,CTM ಸಲಾಂ ತಂಗಲ್, ಅಬ್ಬಾಸ್ ಕೊಳಂಗರೆ, ಅಬ್ಬಾಸ್ ಹಾಜಿ ಕೊಮರಂಗಳ, ಬಿ ಎಚ್ ಇಸ್ಮಾಯಿಲ್, UBM ಮುಹಮ್ಮದ್ ಹಾಜಿ, ಇಸ್ಮಾಯಿಲ್ ಹಾಜಿ ಪೆರಿಬೈಲ್, ಅಬ್ಬಾಸ್ ಹಾಜಿ ಕೊಪ್ಪಳ, ಎಸ್ಸೆಸ್ಸೆಫ್ ಉಳ್ಲಾಲ ಡಿವಿಷನ್ ಪ್ರ.ಕಾರ್ಯದರ್ಶಿಯಾದ ಹಮೀದ್ ತಲಪಾಡಿ, ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಅಧ್ಯಕ್ಷರಾದ ಸಿರಾಜುದ್ದೀನ್ A.H, ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ಅಧ್ಯಕ್ಷರಾದ ಸಿದ್ದೀಕ್ ಕೊಮರಂಗಳ, ಪಂಚಾಯತ್ ಸದಸ್ಯರಾದ ಮೊಯ್ದೀನ್ ಬಾವ ಕೊಮರಂಗಳ, ಹಸೈನಾರ್, ಖಾದರ್ ಮಕ್ಯಾರ್, ಸೋಷಿಯಲ್ ಫಾರೂಕ್, ಸಲಾಂ ಕೆ.ಸಿ.ರೋಡ್ ಹಾಗೂ ಇನ್ನಿತರ ನಾಯಕರು ಉಪಸ್ಥಿತರಿದ್ದರು.
SYS ಕೆ.ಸಿ.ರೋಡ್ ಸೆಂಟರ್ ಅಧ್ಯಕ್ಷರಾದ ಉಮರ್ ಮಾಸ್ಟರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Exit mobile version