UN NETWORKS
ಉಳ್ಳಾಲ: ಉಳ್ಳಾಲ ಕೇಂದ್ರ ಜುಮಾ ಮಸೀದಿ ಖತೀಬರಾದ ಅಬ್ದುಲ್ ಅಝೀಝ್ ಬಾಖವಿ ಮಹಿಳಾ ತರ್ಬಿಯತ್ ಕಾಲೇಜು ಉದ್ಘಾಟಿಸಿದರು.
ದಅವಾ ಕಾಲೇಜು ಪ್ರಾಂಶುಪಾಲ ಇಬ್ರಾಹಿಂ ಅಹ್ಸನಿ, ಸಯ್ಯದ್ ಮದನಿ ಅರಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಮದನಿ, ಹಿಫ್ಝುಲ್ ಖುರಾನ್ ಕಾಲೇಜ್ ಪ್ರಾಂಶುಪಾಲ ಝೈನ್ ಸಖಾಫಿ, ಅರಬಿಕ್ ಕಾಲೇಜು ಮುದರ್ರಿಸ್ ಸ್ವಾದಿಖ್ ಸಖಾಫಿ, ಸಯ್ಯದ್ ಮದನಿ ಅರಬಿಕ್ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಆಸೀಫ್ ಅಬ್ದುಲ್ಲ, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ, ಹಾಜಿ ಇಬ್ರಾಹಿಂ ಕಕ್ಕೆತೋಟ, ಮದನಿ ಕಾಲೇಜು ಸಂಚಾಲಕ ಯು.ಎನ್.ಇಬ್ರಾಹಿಮ್, ಉಳ್ಳಾಲ ನಗರ ಸಭೆ ಸದಸ್ಯರಾದ ಯು.ಎ.ಇಸ್ಮಾಯಿಲ್, ಅಯ್ಯೂಬ್ ಮಂಚಿಲ, ಅಸ್ಗರ್ ಆಲಿ, ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಮೊಹಮ್ಮದ್ ತ್ವಾಹ, ಉಪಾಧ್ಯಕ್ಷ ಹಾಜಿ.ಯು.ಎಸ್.ಹನೀಫ್, ಕಾರ್ಯದರ್ಶಿ ಕೆ.ನ್.ಮೊಹಮ್ಮದ್, ಜೊತೆ ಕಾರ್ಯದರ್ಶಿ ಯು.ಪಿ.ಹಮೀದ್, ಕೋಶಾಧಿಕಾರಿ ಅಬ್ದುಲ್ ಜಬ್ಬಾರ್, ಸದಸ್ಯರಾದ ಎ.ಎ.ಖಾದರ್, ಯು.ಕೆ.ಇಬ್ರಾಹಿಮ್, ಎನ್.ಕೆ.ಅಹ್ಮದ್, ಅಬ್ದುಲ್ ಫತಾಕ್, ಯು.ಎಸ್.ನಝೀರ್, ಅಶ್ರಫ್, ಯು.ಡಿ.ಇಬ್ರಾಹಿಮ್, ರಹ್ಮತ್ ಮೊದಲಾದವರು ಉಪಸ್ಥಿತರಿದ್ದರು.
ಅನುದಾನಿತ ಸಯ್ಯದ್ ಮದನಿ ಉರ್ದು ಶಾಲೆಯ ಮುಖ್ಯೋಪದ್ಯಾಯ ಕೆ.ಎಮ್.ಕೆ. ಮಂಜನಾಡಿ ಕಾರ್ಯಕ್ರಮ ನಿರೂಪಿದರು. ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಮೊಹಮ್ಮದ್ ತ್ವಾಹ ಪ್ರಾಸ್ತವಿಕವಾಗಿ ಮಾತನಾಡಿ ದನ್ಯವಾದಗೈದರು.