ಉಳ್ಳಾಲ: 8 ತಂಡದ ಮಾಸ್ಟರ್ ಕ್ರಿಕೆಟ್ ಲೀಗ್‍ನ ಸಮಾರೋಪ ಸಮಾರಂಭ
UllalaVani
UN NETWORKS
ಉಳ್ಳಾಲ: ಉಳ್ಳಾಲ ಕ್ರಿಕೆಟ್ ಬೋರ್ಡ್ ಆಯೋಜಿಸಿದಂತಹ 8 ತಂಡದ ಮಾಸ್ಟರ್ ಕ್ರಿಕೆಟ್ ಲೀಗ್‍ನ ಸಮಾರೋಪ ಸಮಾರಂಭ ಉಳ್ಳಾಲ ಸೀ ಮೈದಾನದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉಳ್ಳಾಲ ನಗರ ಸಭಾ ಹಿರಿಯ ಸದಸ್ಯರಾದ ಮೊಹಮ್ಮದ್ ಮುಕ್ಕಚ್ಚೇರಿ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ಒಂದೇ ನಾಣ್ಯದ ಮುಖ ಇದ್ದಂತೆ, ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿ ಐಕ್ಯತೆ ಸಹೋದರತೆಯನ್ನು ಎತ್ತಿ ಹಿಡಿಯಬೇಕು ಎಂದರು.ಉಳ್ಳಾಲ ನಗರ ಸಭಾ ಸದಸ್ಯರಾದ ಯು.ಎ.ಇಸ್ಮಾಯಿಲ್, ಅಬ್ದುಲ್ ಜಬ್ಬಾರ್,ಅಬ್ದುಲ್ ಅಝೀಝ್, ಮಾಜಿ ಸದಸ್ಯ ಅಶ್ರಫ್ ಬಾವ, ಉಳ್ಳಾಲ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಖಲೀಲ್ ಉಳ್ಳಾಲ್, ಉಪಾಧ್ಯಕ್ಷ ಫಯಾಝ್ ಪಟ್ಲ, ಸಂಚಾಲಕ ಸಾಜಿದ್ ಉಳ್ಳಾಲ್ ಉಪಸ್ಥಿತರಿದ್ದರು.
ಆಲ್ಫಾ ಸ್ಪೋಟ್ರ್ಸ್ ಕ್ಲಬ್ ಫ್ರಥಮ ಮತ್ತು ಕೋಟೆಪುರ,ಕೋಡಿ ಫ್ರೆಂಡ್ಸ್ ಸರ್ಕಲ್ ದ್ವಿತೀಯ ಸ್ಥಾನಪಡೆಯಿತು.ಉಳ್ಳಾಲ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಖಲೀಲ್ ಉಳ್ಳಾಲ್ ಸ್ವಾಗತಿಸಿದರು, ಅಬ್ದುಲ್ ಸಮದ್ ಕಾರ್ಯಕ್ರಮ ನಿರೂಪಿಸಿದರು.