Site icon Ullalavani

ಕೆ.ಟಿ. ಸುವರ್ಣರಿಗೆ ಕೋಟಿ ಚೆನ್ನಯ್ಯ ಪ್ರಶಸ್ತಿ ಪ್ರದಾನ

UN NETWORKS

ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಧಾರ್ಮಿಕ ಪರಿಷತ್‍ನ ಮಾಜಿ ಸದಸ್ಯ ಹಾಗೂ ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಅಧ್ಯಕ್ಷ ಕೆ.ಟಿ. ಸುವರ್ಣ ಅವರಿಗೆ ಕೋಟಿ ಚೆನ್ನಯ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತೊಕ್ಕೊಟ್ಟು ಜಂಕ್ಷನ್ ಬಾಯ್ಸ್ ಹಾಗೂ ತೊಕ್ಕೊಟ್ಟು ನಾಗರಿಕ ಸಮಿತಿ ಆಶ್ರಯದಲ್ಲಿ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ 70ಕೆ.ಜಿ. ವಿಭಾಗದ ಕೋಟಿ ಚೆನ್ನಯ ಟ್ರೋಫಿ ಪ್ರೊ ಕಬಡ್ಡಿ ಪಂದ್ಯಾಟದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ, ದೇವಿ ಬೈದೆದಿ ಕೋಟಿ ಚೆನ್ನೆಯ ಗೆಜ್ಜೆಗಿರಿ ಮೂಲಕ್ಷೇತ್ರದ ಮೊಕ್ತೇಸರ ಚಂದ್ರಶೇಖರ ಉಚ್ಚಿಲ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಉಪಾಧ್ಯಕ್ಷ ಸುರೇಶ್ ಭಟ್ನಗರ, ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಕಾರ್ಯಾಧ್ಯಕ್ಷ ಸತೀಶ್ ಕರ್ಕೇರ, ಭವಾನಿ ಸ್ಯಾನಿಟರಿ ಮಾಲೀಕ ಯೋಗೀಶ್ ಕುಮಾರ್, ದೇರಳಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಪುರುಷೋತ್ತಮ ಅಂಚನ್, ಕಡಂಬಾರು ಮಲರಾಯ ಬಂಟ ಧೂಮಾವತಿ, ಉಳ್ಳಾಲಬೈಲು ಶ್ರೀ ವೈದ್ಯನಾಥ ಕ್ಷೇತ್ರದ ಅಧ್ಯಕ್ಷ ಪ್ರವೀಣ್ ಕುಮಾರ್, ಉದ್ಯಮಿಗಳಾದ ಸಂತೋಷ್ ಕುಮಾರ್ ಕೃಷ್ಣ ನಗರ, ವಾಝ್‍ವಾಲ್ಡ್ ಡಿಸೋಜ, ಪಾರ್ಥ ಕಿನ್ಯಾ, ರಹೀಂ ಉಚ್ಚಿಲ, ಜಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಉಳ್ಳಾಲ ನಗರಸಭಾ ಸದಸ್ಯರಾದ ನಮಿತಾ ಗಟ್ಟಿ, ಗೀತಾ ಬಾೈ, ಮಾಜಿ ಸದಸ್ಯ ಭಗವಾನ್‍ದಾಸ್, ಎಬಿಸಿ ತೊಕ್ಕೊಟ್ಟುವಿನ ಸೂರಜ್, ಶರತ್ ಶೆಟ್ಟಿ, ವಿನೋದ್, ವಿಜಯ್ ಪಂಡಿತ್ ಹೌಸ್, ಪುಷ್ಪರಾಜ್, ಹೆನ್ರಿ ಡಿಸೋಜ ಕೃಷ್ಣನಗರ, ಮನೋಜ್ ತೊಕ್ಕೊಟ್ಟು, ರೋಹನ್ ತೊಕ್ಕೊಟ್ಟು, ಕಮಲಾಕ್ಷ ತೊಕ್ಕೊಟ್ಟು, ಯತೀಶ್ ತೊಕ್ಕೊಟ್ಟು, ಅರುಣ್ ಗಾಂಧಿನಗರ, ಅಜಿತ್ ಉಳ್ಳಾಲ್, ಅರುಣ್ ಭಂಡಾರಿ, ದೀಕ್ಷಿತ್ ಕೃಷ್ಣ ನಗರ ಹಾಗೂ ಸಂತೋಷ್ ಕಾಪಿಕಾಡು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟು ಕೃಷ್ಣರಾಜ್ ಪುತ್ರನ್, ಉಪನ್ಯಾಸಕ ಹಾಗೂ ಬಹುಮುಖ ಸಾಧಕ ಅರುಣ್ ಉಳ್ಳಾಲ್, ಶೈಕ್ಷಣಿಕ ಸಾಧಕಿ ಸಿಂಚನ ಎಸ್. ತೊಕ್ಕೊಟ್ಟು ಅವರನ್ನು ಅಭಿನಂದಿಸಲಾಯಿತು.

Exit mobile version