ಮುನ್ನೂರು: ಹಿರಿಯರು ನಡೆಸಿಕೊಂಡು ಬಂದ ಸೇವೆಯನ್ನು ನಾವು ನಿರಂತರವಾಗಿ ಮಾಡಿಕೊಂಡು ಹೋಗಲು ಗಾಣದ ಕೊಟ್ಯ ಅಗತ್ಯತೆ ಇದೆ. ಅದಕ್ಕೆ ಎಲ್ಲರೂ ಕೈಜೋಡಿಸಿ ಸಂಪನ್ಮೂಲವನ್ನು ಭರ್ತಿ ಮಾಡಿ ಒಂದು ವರ್ಷದೊಳಗೆ ಗಾಣದ ಮನೆ ನಿರ್ಮಾಣ ಆಗುವ ಹಾಗೆ ಮಾಡಬೇಕು ಎಂದು ಎಂದು ಗುರುಪುರ ವಜ್ರದೇಹಿಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಮುನ್ನೂರು ಗ್ರಾಮದಲ್ಲಿ ಅನಾದಿ ಕಾಲದಿಂದಲೂ ಇದ್ದ ಗಾಣದ ಮನೆಯನ್ನು ಜೀರ್ಣೋದ್ಧಾರಗೊಳಿಸುವ ಪ್ರಯುಕ್ತ ಗಾಣದ ಮನೆ ಜೀರ್ಣೋದ್ಧಾರ ಸಮಿತಿ ವತಿಯಿಂದ ಜರಗಿದ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದ ಬಳಿಕ ಆಶೀರ್ವಚನ ನೀಡಿ ಅವರು ಮಾತನಾಡಿದರು.ಪಂಜಂದಾಯ ಬಂಟ ವೈದ್ಯನಾಥ ದೈವಸ್ಥಾನದ ಆಡಳಿತ ಮೊಕ್ತೇಸರ ರವೀಂದ್ರನಾಥ ಪೂಂಜ ಮಾತನಾಡಿ ಈ ಗಾಣದ ಕೊಟ್ಯ ಆದಷ್ಟು ಬೇಗ ನಿರ್ಮಾಣವಾಗಲಿ ಎಂದು ಹಾರೈಸಿದರು.ಕಾರ್ಯಕ್ರಮದಲ್ಲಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಧರ್ಮದರ್ಶಿ ತಂತ್ರಿ ಶ್ರೀ ಕೃಷ್ಣ ಕುಣಿಕುಳ್ಳಾಯ, ಬಂಟ್ವಾಳ ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ರಘು ಸಫಲ್ಯ, ಗಾಣದ ಮನೆ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಸೀತಾರಾಮ ಸಫಲ್ಯ, ಅತ್ತಾವರ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ತಾರನಾಥ ಸಫಲ್ಯ, ಸ್ಥಳೀಯ ಮುಖಂಡ ಕೃಷ್ಣಪ್ಪ ಸಾಲ್ಯಾನ್, ಬಿ.ಎಂ. ಕಮಲಾಕ್ಷ, ಉದ್ಯಮಿ ಉಮಾಕಾಂತ್, ವಿನೋದ್ ಶೆಟ್ಟಿ ಬೊಲ್ಯಗುತ್ತು, ರಮೇಶ್ ಮೆಂಡನ್, ಅಧ್ಯಕ್ಷ ವೆಂಕಟೇಶ್ ಹಾಗೂ ಬಾಲಕೃಷ್ಣ ಮೂಲ್ಯಣ್ಣ ಮೊದಲಾದವರು ಉಪಸ್ಥಿತರಿದ್ದರು.
ಶಿವಾನಂದ ಮೆಂಡನ್ ಸ್ವಾಗತಿಸಿದರು.ಬಂಟ್ವಾಳ ತಾಲೂಕು ಗಾಣಿಗರ ಸಂಘದ ಉಪಾಧ್ಯಕ್ಷ ನಾಗೇಶ್ ಸಫಲ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಾಣದ ಮನೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗಣೇಶ್ ಟೈಲರ್ ಗಾಣದ ಮನೆಯ ಹಿನ್ನೆಲೆ ವಿವರಿಸಿದರು. ವಾಮನ್‍ರಾಜ್ ಪಾವೂರು ಕಾರ್ಯಕ್ರಮ ನಿರೂಪಿಸಿದರು.