Site icon Ullalavani

ಪ್ರವಾದಿ ನಿಂದನೆ: ಅಸೈಗೋಳಿಯಲ್ಲಿ ಪ್ರತಿಭಟನೆ

UN NETWORKS

ಅಸೈಗೋಳಿ: ಪ್ರವಾದಿಯವರು ಮಾನವ ಸಮುದಾಯಕ್ಕೆ ಉಪದೇಶ ನೀಡುವ ಮೂಲಕ ಧರ್ಮದ ಬೆಳವಣಿಗೆಗೆ ಕಾರಣಕರ್ತರಾದವರು. ಅವರು ಮುಸ್ಲಿಂ ಸಮುದಾಯದ ಕಾರಣೀಕೃತ ನೇತರರಾಗಿದ್ದಾರೆ. ಅವರನ್ನು ನಿಂದಿಸಿ ಹೇಳಿಕೆ ನೀಡಿದ ಖಾಸಗಿ ಚಾನೆಲ್‍ನ ನಿರೂಪಕ ಅಜಿತ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಪನೀರ್ ಮಸೀದಿ ಖತೀಬ್ ಯಾಸಿರ್ ಅರಾಫತ್ ಕೌಸರಿ ಒತ್ತಾಯಿಸಿದರು.

ಅವರು ಪ್ರವಾದಿಯವರನ್ನು ಅವಹೇಳನಕಾರಿಯಾಗಿ ನಿಂದಿಸಿದ ಖಾಸಗಿ ಚಾನೆಲ್‍ನ ಅಜಿತ್ ಮತ್ತು ರಾಮಚಂದ್ರರ ಬಗ್ಗೆ ಲಘುವಾಗಿ ಮಾತನಾಡಿದ ಭಗವಾನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದುಒತ್ತಾಯಿಸಿ ಅಸೈಗೋಳಿಯಲ್ಲಿ ನಡೆದ ಅಸೈಯ ನಮ್ಮನಾಡು ನಮ್ಮದು ವಾಟ್ಸಾಪ್ ಗ್ರೂಪ್‍ನ ಸದಸ್ಯರ ಪ್ರತಿಭಟನೆಯಲ್ಲಿ ಮಾತನಾಡಿದರು.ಈ ಸಂದರ್ಭ ಬಿಜೆಪಿ ಮುಖಂಡ ಫಝಲ್ ಅಸೈಗೋಳಿ ಮಾತನಾಡಿದರು. ಈ ಸಂದರ್ಭ ಎನ್‍ಎಸ್ ಕರೀಂ,ನಿಯಾಝ್, ಸುಲೈಮಾನ್ ಮೊದಲಾದವರು ಉಪಸ್ಥಿತರಿದ್ದರು.

Exit mobile version