ಅಜಿತ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಮುಸ್ಲಿಂ ಸಂಘಟಕರಿಂದ ಠಾಣೆಗೆ ಮುತ್ತಿಗೆ: ದೂರು
UllalaVani
UN NETWORKS
ಕೊಣಾಜೆ: ಖಾಸಗಿ ಚಾನೆಲ್‍ನ ನಿರೂಪಕ ಅಜಿತ್‍ರವರು ವಿಚಾರವೊಂದರಲ್ಲಿ ಪ್ರವಾದಿ ಪೈಗಂಬರ್‍ರವರನ್ನು ಅವಹೇಳನಕಾರಿಯಾಗಿ ನಿಂದಿಸಿ ಹೇಳಿಕೆ ನೀಡಿರುವುದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿವಿಧ ಮುಸ್ಲಿಂ ಸಂಘಟನೆಗಳು ಕೊಣಾಜೆ ಠಾಣೆಗೆ ಮುತ್ತಿಗೆ ಹಾಕಿ ಸೋಮವಾರ ದೂರು ಸಲ್ಲಿಸಿದರು. ಮಂಜನಾಡಿ ಜುಮ್ಮಾ ಮಸೀದಿ ಮತ್ತದರ ವ್ಯಾಪ್ತಿಯಲ್ಲಿರುವ ಸಂಘಟನೆಗಳು ಮತ್ತು ಮಸೀದಿಗಳ ಸದಸ್ಯರು ಒಟ್ಟಾಗಿ ದೂರು ನೀಡಿದ್ದು, ಒಟ್ಟು 16 ದೂರುಗಳನ್ನು ಕೊಣಾಜೆ ಠಾಣೆಯಲ್ಲಿ ಸ್ವೀಕಾರ ಮಾಡಲಾಗಿದೆ.
ಅಜಿತ್ ವಿರುದ್ಧ ದೂರು ದಾಖಲು ಮಾಡಲೇಬೇಕೆಂದು ಒತ್ತಾಯಿಸಿ ಹಲವು ಮಸೀದಿಗಳ , ಸಂಘಟನೆಗಳ ಸಮಿತಿ ಸದಸ್ಯರು ಸೋಮವಾರ ಪೊಲೀಸ್ ಠಾಣೆಗೆ ಜಮಾಯಿಸಿ ಒತ್ತಡ ಹೇರಿದರು.ಈ ಸಂದರ್ಭ ಮಾತನಾಡಿದ ಕೊಣಾಜೆ ಇನ್ಸ್‍ಪೆಕ್ಟರ್ ರವಿನಾಯ್ಕ್ ಅವರು, ಅಜಿತ್‍ರವರ ಅಹವೇಳನಕಾರಿ ಹೇಳಿಕೆ ವಿರುದ್ಧ ವಿಶ್ವ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಎಲ್ಲಾ ಠಾಣೆಗಳಲ್ಲಿ ದೂರು ಸ್ವೀಕಾರ ಆಗುತ್ತಿದೆ. ಇದು ಕೇವಲ ಕೇವಲ ಕೊಣಾಜೆ ಠಾಣೆಗೆ ಸಂಬಂಧಿಸಿದ ದೂರು ಆಗದ ಕಾರಣ ಮೇಲಧಿಕಾರಿಗಳ ಆದೇಶ ಪರಿಗಣಿಸಿ ದೂರು ದಾಖಲಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸದಂರ್ಭ ಮಂಜನಾಡಿ ಜುಮಾಮಸೀದಿ ಕಾರ್ಯದರ್ಶಿ ಅಝೀಜ್ ಪರ್ತಿಪ್ಪಾಡಿ. ಕೆಎಂಕೆ ಮಂಜನಾಡಿ, ಎನ್‍ಎಸ್ ಕರೀಂ, ಇಝುದ್ದೀನ್ ಅಹ್ಸನಿ, ಇಬ್ರಾಹಿಂ ಮದನಿ , ಮೋನು ಕಲ್ಕಟ್ಟ, ಮಂಜನಾಡಿ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಅಸೈ ಇಸ್ಮಾಯಿಲ್ ದೊಡ್ಡಮನೆ, ಕುಂಞಬಾವ್, ಅಶ್ರಫ್, ಮೊದಲಾದವರು ಉಪಸ್ಥಿತರಿದ್ದರು.