UN NETWORKS
ದುಬೈ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC) ಯು.ಎ.ಇ ವತಿಯಿಂದ ಡಿ.ಕೆ.ಎಸ್.ಸಿ ಸಂಘಟನೆ ಯ ಪ್ರವರ್ತಕರು, ಸದಸ್ಯರು, ಹಿತೈಷಿಗಳು ಹಾಗು ಕರಾವಳಿ ಪ್ರದೇಶದ ಕುಟುಂಬ ಸದಸ್ಯರನ್ನು ಒಂದೇ ಕಡೆ ಸೇರಿಸಿ ಧಾರ್ಮಿಕಚೌಕಟ್ಟಿನೊಳಗೆ ಗಂಡಸರು, ಮಹಿಳೆಯರು ಮಕ್ಕಳು ಪ್ರತ್ಯೇಕವಾಗಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಆಟೋಟ ಕಾರ್ಯಕ್ರಮದೊಂದಿಗೆ 2019 ಜನವರಿ 4 ರಂದು ವುಡ್ ಲೀಂ ಪಾರ್ಕ್ ಸ್ಕೂಲ್ ಅಜ್ಮಾನ್ ಇದರ ಒಳಾಂಗಣ ಹಾಗೂ ಒರಾಂಗಣವ್ಯವಸ್ಥೆ ಇದ್ದು ಪ್ರಕ್ರತಿ ಸೌಂದರ್ಯ ದಿಂದ ಕೂಡಿದ ಪ್ರದೇಶದಲ್ಲಿ “ಗ್ರಾಂಡ್ ಕರಾವಳಿ ಪ್ಯಾಮಲಿ ಮುಲಾಖತ್” ಸಂಘಟಿಸಿರುತ್ತದೆ.
ಕಾರ್ಯಕ್ರಮವು ಬೆಳಿಗ್ಗೆ ಘಂಟೆ 9 ಕ್ಕೆ ಆಗಮಿಸಿದ ಪ್ರತಿನಿದಿಗಳ ನೋಂದಾವಣೆ ಹಾಗೂ ಬೆಳಿಗ್ಗಿನ ಉಪಹಾರ ಹಾಗೂ 9 .30 ಕ್ಕೆ ಕಾರ್ಯಕ್ರಮವು ಅಧಿಕ್ರತವಾಗಿ ಉದ್ಘಾಟನೆಗೊಳ್ಳಲಿದ್ದು ಕ್ಲಪ್ತ ಸಮಯ 10 ಕ್ಕೆ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆಹಾಗೂ ಮಹಿಳೆಯರು ಮನೆಯಲ್ಲಿ ತಯಾರಿಸಿ ತಂದ ಖಾದ್ಯ ತಿಂಡಿ ತಿನಿಸುಗಳ ಸ್ಪರ್ಧೆಯು ನಡೆಯಲಿದೆ.ಈ ಮಹತ್ತರವಾದ ಕಾರ್ಯಕ್ರಮಕ್ಕೆ ಕರಾವಳಿ ಯ ಡಿ.ಕೆ.ಎಸ್.ಸಿ ಹಿತೈಷಿಗಳು ಹಾಜರಾಗಿ ಯಶಸ್ವಿಗೆ ಸಹಕರಿಸಬೇಕಾಗಿ ಸಂಘಟಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.ಪ್ರವೇಶ ಪತ್ರವು ಕಡ್ಡಾಯವಾಗಿರುತ್ತದೆ ಇದನ್ನು DKSC ಎಲ್ಲ ಯೂನಿಟ್ ನೇತಾರರಲ್ಲಿ ಪಡೆಯಬಹದು.
ಪ್ರವೇಶ ಪತ್ರದ ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ
ಸೈಫುದ್ದೀನ್ ಪಟೇಲ್ +971509447585
ಯೂಸುಫ್ ಆರ್ಲಪದವು +971507240659
ಕಮರುದ್ದೀನ್ ಗುರುಪುರ +971551596353
ಕಮಾಲ್ ಅಜ್ಜಾವರ +971562169881