Site icon Ullalavani

ಪ್ರವಾದಿ ಬಗ್ಗೆ ನಿಂದನೆ : ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ವತಿಯಿಂದ ದೂರು

UN NETWORKS

ದೇರಳಕಟ್ಟೆ: ಖಾಸಗಿ ಸುದ್ಧಿ ವಾಹಿನಿಯ ನಿರೂಪಕ ಅಜಿತ್ ಎಂಬಾತ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಬಗ್ಗೆ ಇತ್ತೀಚಿನ ನಿಂದನಾತ್ಮಕ ಹೇಳಿಕೆಯನ್ನು ವಿರೋಧಿಸಿ ಮತ್ತು ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಅಧ್ಯಕ್ಷ ಇಸ್ಮಾಯಿಲ್ ಹಾಜಿ ನೇತೃತ್ವದಲ್ಲಿ ಕೊಣಾಜೆ ಪೊಲೀಸ್ ಠಾಣಾಧಿಕಾರಿಗೆ ದೂರು ನೀಡಲಾಯಿತು.

ನಿಯೋಗದಲ್ಲಿ ಅಸೋಸಿಯೇಷನ್ ಗೌರವ ಅಧ್ಯಕ್ಷರಾದ ಮಜಲ್ ಅಬ್ಬಾಸ್ ಹಾಜಿ , ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಕೊಣಾಜೆ , ಉಪಾಧ್ಯಕ್ಷರಾದ ಸ್ವಾಗತ್ ಅಬೂಬಕರ್ ಹಾಜಿ , ಕೋಶಾಧಿಕಾರಿ ಅಬೂಸ್ವಾಲಿಹ್ ಹಾಜಿ ಕುರಿಯಕ್ಕಾರ್, ಪತ್ರಿಕಾ ಕಾರ್ಯದರ್ಶಿ ಹಮೀದ್ ಮದ್ಪಾಡಿ, ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಲತೀಫ್ ದಾರಿಮಿ ರೆಂಜಾಡಿ, ರೇಂಜ್ ವ್ಯಾಪ್ತಿಯಲ್ಲಿನ ವಿವಿಧ ಮಸೀದಿ ಆಡಳಿತ ಸಮಿತಿ ಪದಾಧಿಕಾರಿಗಳಾದ ಅಝೀಝ್ ಹಾಜಿ ದೇರಳಕಟ್ಟೆ, ಅಬೂಬಕರ್ ಹಾಜಿ ನಾಟೆಕಲ್, ಸಯ್ಯದಾಲಿ, ಇಬ್ರಾಹಿಮ್ ಭಂಡಾರಪಾದೆ, ಸಿ.ಎಮ್ ಶರೀಫ್ ಪಟ್ಟೋರಿ, ಮೊಹಿದೀನ್ ಮೀಂಪ್ರಿ, ಮಹಮ್ಮದ್ ಲಾಡ, ಅಲ್ತಾಫ್ ಅರಸ್ತಾನ ಮತ್ತಿತರರು ಉಪಸ್ಥಿತರಿದ್ದರು.

Exit mobile version