Site icon Ullalavani

ಅಳೇಕಲ : ಸುನ್ನೀ ಆದರ್ಶ ಸಂಗಮ

UN NETWORKS

ಅಳೇಕಲ: ಉಳ್ಳಾಲ ಎಸ್.ವೈ.ಎಸ್. ಉಳ್ಳಾಲ ಸೆಂಟರ್ ಅಧೀನದ ಎಸ್.ವೈ.ಎಸ್. ಅಳೇಕಲ, ಮಂಚಿಲ, ಮಾರ್ಗತಲೆ ಬ್ರಾಂಚ್ ವತಿಯಿಂದ ಸುನ್ನೀ ಆದರ್ಶ ಸಂಗಮ ಅಳೇಕಲದ ಜೂನಿಯರ್ ಕಾಲೇಜು ಸಮೀಪದ ಮದನಿ ಮೈದಾನದಲ್ಲಿ ನಡೆಯಿತು.

ಅಳೇಕಲ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಅಬೂ ಝಿಯಾದ್ ಮದನಿ ಪಟ್ಟಾಂಬಿ ದುಆದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸುಂದರಿಬಾಗ್ ಬದ್ರಿಯ ಜುಮಾ ಮಸೀದಿಯ ಖತೀಬ್ ಶರೀಫ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ವೈ.ಎಸ್. ಉಳ್ಳಾಲ ಸೆಂಟರ್ ಅಧ್ಯಕ್ಷ ಸೈಯದ್ ಜಲಾಲ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ವಹಾಬ್ ಸಖಾಫಿ ಮಂಬಾಡ್ ಮುಖ್ಯ ಭಾಷಣ ಮಾಡಿದರು.

ಸೈಯದ್ ಮದನಿ ಮೊಹಲ್ಲಾ ಒಕ್ಕೂಟದ ಗೌರವಾಧ್ಯಕ್ಷ ಯು.ಎಸ್.ಹಂಝ ಹಾಜಿ, ಎಸ್ಸೆಸ್ಸೆಫ್ ದ.ಕ. ಜಿಲ್ಲಾ ನಾಯಕ ಸೈಯದ್ ಖುಬೈಬ್ ತಂಙಳ್, ಎಸ್.ವೈ.ಎಸ್. ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ, ಎಸ್.ವೈ.ಎಸ್. ಉಳ್ಳಾಲ ಸೆಂಟರ್ ಉಪಾಧ್ಯಕ್ಷ ಬಶೀರ್ ಅಹ್ಸನಿ ತೋಡಾರ್, ಎಸ್.ವೈ.ಎಸ್. ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಸೈಯದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಬೂ ಅನಸ್ ಜಮಾಲ್ ಹಾಗು ಇನ್ನಿತರ ಉಲಮಾ ಉಮರಾ ಪ್ರಮುಖರು ಉಪಸ್ಥಿತರಿದ್ದರು.
ಸೈಯದ್ ಮದನಿ ಮೊಹಲ್ಲಾ ಒಕ್ಕೂಟದ ಅಧ್ಯಕ್ಷ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ನಾಯಕರಾದ ಮುಸ್ತಫ ಮುಕ್ಕಚ್ಚೇರಿ ಕಾರ್ಯಕ್ರಮ ನಿರೂಪಿಸಿದರು.

Exit mobile version