Site icon Ullalavani

ಕಟ್ಟಡದಿಂದ ಬಿದ್ದು ಗಾಯಗೊಂಡ ಉಳ್ಳಾಲದ ಯುವಕ ಚಿಕಿತ್ಸೆಫಲಕಾರಿಯಾಗದೆ ಸಾವು

UN NETWORKS

ಉಳ್ಳಾಲ: ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ ಉಳ್ಳಾಲ ನಿವಾಸಿ ಯುವಕ ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡಿದ್ದು, ಮೂರು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ನಗರದ ಎ.ಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಉಳ್ಳಾಲ ವಿದ್ಯಾರಣ್ಯನಗರ ನಿವಾಸಿ ವಸಂತ ಎಂಬವರ ಪುತ್ರ ಅಕ್ಷಯ್ (22) ಸಾವನ್ನಪ್ಪಿದವರು. ಡಿ.9 ರಂದು ಮಂಗಳೂರಿನ ಕಟ್ಟಡವೊಂದರಲ್ಲಿ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಅಕ್ಷಯ್ ಆಯತಪ್ಪಿ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಎಲುಬು ಮುರಿತಕ್ಕೆ ಸಂಬಂಧಪಟ್ಟು ಚಿಕಿತ್ಸೆ ನೀಡಿದ್ದಾರೆನ್ನಲಾಗಿದ್ದು, ಆದರೆ ಹೊಟ್ಟೆಯೊಳಗೆ ಆಗಿರುವ ಗಾಯದ ಕುರಿತು ಪರಿಶೀಲನೆ ನಡೆಸಿರಲಿಲ್ಲ. ಇದರಿಂದ ಅಕ್ಷಯ್ ಅಕ್ಷಯ್ ಸಾವನ್ನಪ್ಪಿದ್ದಾರೆಂಬುದು ಸ್ನೇಹಿತರ ಆರೋಪವಾಗಿದೆ. ಇವರು ಉತ್ತಮ ಕ್ರಿಕೆಟ್ ಆಟಗಾರರಾಗಿದ್ದುಕೊಂಡು, ಉಳ್ಳಾಲದ ಸ್ವಸ್ತಿಕ್ ಕ್ರಿಕೆಟರ್ಸ್ ತಂಡದ ಸದಸ್ಯರಾಗಿದ್ದರು. ಅಪಾರ ಸ್ನೇಹಿತರನ್ನು ಹೊಂದಿರುವ ಇವರು ಸೌಮ್ಯ ಸ್ವಭಾವದವರಾಗಿದ್ದರು. ನ.13 ರಂದು ಸುರತ್ಕಲ್ ಹೊನ್ನಕಟ್ಟೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಕುತ್ತಾರು ಸುಭಾಷನಗರ ನಿವಾಸಿ ಸಾವನ್ನಪ್ಪಿದ ಅಕ್ಷಯ್ , ಇವರ ಆಪ್ತಸ್ನೇಹಿತರಾಗಿದ್ದರು.

Exit mobile version