Site icon Ullalavani

ಖಾಸಗಿ ಚಾನೆಲ್ ನ ನಿರೂಪಕನಿಂದ ಪ್ರವಾದಿ ನಿಂದನೆ:ಉಳ್ಳಾಲ ದರ್ಗಾ ಸಮಿತಿಯಿಂದ ಖಂಡನಾ ಸಭೆ

UN NETWORKS

ಉಳ್ಳಾಲ: ಉಳ್ಳಾಲ ಮುಸ್ಲಿಂ ಜಮಾಅತ್ ಮತ್ತು ಸಯ್ಯದ್ ಮದನಿ ದರ್ಗಾ ಆಡಳಿತ ಸಮಿತಿ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರವರನ್ನು ತುಚ್ಚ ಶಬ್ದದಿಂದ ಮಾತಾಡಿದ ಸುವರ್ಣ ಚಾನೆಲ್ ನ ಮುಖ್ಯ ನಿರೂಪಕ ಅಜಿತ್ ಅವರನ್ನು ಕೂಡಲೇ ಕೆಲಸದಿಂದ ತೆಗೆಯಬೇಕು,ಮತ್ತು ಐ.ಪಿ.ಎಸ್ ಕೋಡ್ ಪ್ರಕಾರ ಕೇಸು ದಾಖಲಿಸಿ ಮುಂದೆ ಆಗುವ ಅನಾಹುತವನ್ನು ತಪ್ಪಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ಮುಖೇನ ಮಾನ್ಯ ಮುಖ್ಯಮಂತ್ರಿಯವರಿಗೆ ಖಂಡನಾ ನಿರ್ಣಯವನ್ನು ಅರ್ಪಿಸುತ್ತೇವೆ ಎಂದು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ದರ್ಗಾ ವಠಾರದಲ್ಲಿ ನಡೆದ ಖಂಡನಾ ಸಭೆಯಲ್ಲಿ ಹೇಳಿದರು.

ದರ್ಗಾ ಸಮಿತಿ ಸದಸ್ಯರಾದ ಫಾರೂಕ್ ಉಳ್ಳಾಲ್ ಮಾತನಾಡಿ ಸುವರ್ಣ ಚಾನೆಲ್ ನಿರೂಪಕ ಅಜಿತ್ ಅವರು ಇಸ್ಲಾಮ್ ಮತ್ತು ಮುಸ್ಲಿಮರ ಜೀವಕ್ಕಿಂತಲೂ ಹೆಚ್ಚು ಮೌಲ್ಯಯುತವಾದ ಜೀವನವನ್ನು ನಡೆಸಿದಂತಹ ನಮ್ಮೆಲ್ಲರ ಪ್ರವಾದಿವರ್ಯರನ್ನು ಬಹಳ ತುಚ್ಚ ಪದ ಬಳಸಿದಕ್ಕೆ ನಾವು ಅತ್ಯಂತ ಕಟು ಶಬ್ದದಿಂದ ಖಂಡನೆ ಮಾಡುತ್ತಿದ್ದೇವೆ ಎಂದರು.

ಮದನಿ ದರ್ಗಾ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ಮೊಹಮ್ಮದ್ ತ್ವಾಹ, ಉಪಾಧ್ಯಕ್ಷರಾದ ಯು.ಕೆ.ಮೋನು ಇಸ್ಮಾಯಿಲ್, ಬಾವಾ ಮೊಹಮ್ಮದ್ ಸದಸ್ಯರಾದ ಆಸೀಫ್ ಅಬ್ದುಲ್ಲ , ಇಬ್ರಾಹಿಮ್ ಹಾಜಿ ಕಕ್ಕೆತೋಟ, ಯು.ಪಿ ಅಬ್ಬಾಸ್ ಹಾಜಿ, ಮುಸ್ತಫ ಮಂಚಿಲ, ಮುಸ್ತಫ, ಯು.ಪಿ.ಹಮೀದ್, ಕೆ.ಎನ್.ಮೊಹಮ್ಮದ್,ವಿ,ಸಿ.ಖಾಸಿಂ.ಮಯ್ಯದ್ದಿ ಕೋಡಿ, ಖಾಸಿಮ್ ಮೊದಲಾದವರು ಉಪಸ್ಥಿತರಿದ್ದರು.

Exit mobile version