UN NETWORKS
ಬೋಳಿಯಾರು: ಗ್ರಾಮದ ಧರ್ಮನಗರ ಬರಡು ಭೂಮಿಯಾಗಿದ್ದು, ಕ್ರೈಸ್ತರು ವಾಸ ಆರಂಭಿಸಿ ಕೃಷಿ ಕಾರ್ಯದಲ್ಲಿ ನಿರತರಾಗಿದ್ದರಿಂದ ಇಂದು ಕೃಷಿಯ ಕರ್ಮಭೂಮಿ ಎನಿಸಿದೆ ಎಂದು ಬೋಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಆಚಾರ್ಯ ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿ ಕೃಷಿ ಇಲಾಖೆಯ ಅಬ್ದುಲ್ ಬಶೀರ್ ಮಾತನಾಡಿ, ಕೃಷಿ ಎಂದರೆ ಲಾಭದಾಯಕವಲ್ಲ ಎನ್ನುವ ಭಾವನೆ ರೈತರಲ್ಲಿದೆ. ಇದೇ ಮನೋಭಾನೆಯಲ್ಲಿ ಪೋಷಕರಿಗೆ ಕೃಷಿ ಕೆಲಸ ಎನ್ನುವುದನ್ನೂ ಹೇಳಲು ಮಕ್ಕಳು ನಾಚಿಕೆ ಪಡುತ್ತಿದ್ದಾರೆ. ವಾಸ್ತವವಾಗಿ ಕೃಷಿ ಇಲ್ಲದೆ ಯಾವ ಉದ್ಯಮವೂ ನಡೆಯದು ಎಂದು ತಿಳಿಸಿದರು.
ತೋಟಗಾರಿಕಾ ಇಲಾಖೆಯ ಮಹೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಪ್ರಗತಿಪರ ಕೃಷಿಕ ದಾಮೋದರ, ರಮೇಶ್ ಶೆಟ್ಟಿ ಕರ್ಮಾರ್, ಪಾವೂರು ಪಶು ಚಿಕಿತ್ಸಾಲಯದ ಡಾ. ರೇಖಾ ಹಾಗೂ ಕೃಷಿ ಮಹಿಳಾಸಕ್ತ ಸಂಘದ ತಾಂತ್ರಿಕ ವ್ಯವಸ್ಥಾಪಕಿ ರಮಿತಾ ಉಪಸ್ಥಿತರಿದ್ದರು.
ಆಶಾ ಡಿಸೋಜ ಸ್ವಾಗತಿಸಿದರು. ದಿವ್ಯಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.