ಉಳ್ಳಾಲ: ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ ಜೆಸಿಟಿಯು ಕರೆ ನೀಡಿರುವ ಜ.8,9 ರ ಅಖಿಲ ಭಾರತ ಮುಷ್ಕರಕ್ಕೆ ಸಿಪಿಐಎಂ ನ ಉಳ್ಳಾಲ ವಲಯ ಸಮಿತಿ ಬೆಂಬಲ ಸೂಚಿಸಿದೆ.
ಬೆಲೆ ಏರಿಕೆಯನ್ನು ತಡೆಗಟ್ಟಬೇಕು ,ಕಾರ್ಮಿಕರ ಕನಿಷ್ಟವೇತನ ಮಾಸಿಕ ರೂ.18000 ನಿಗದಿಗೊಳಿಸಬೇಕು, ಗುತ್ತಿಗೆ ಆಧಾರಿತ ಕಾರ್ಮಿಕರನ್ನು ಖಾಯಂಗೊಳಿಸಬೇಕು.ವಾರ್ಷಿಕ ಒಂದು ಕೋಟಿ ಉದ್ಯೋಗ ಸೃಷ್ಟಿಸುವ ಯೋಜನೆ ಕೈಗೊಳದಳಬೇಕು , ಎಲ್ಲಾ ನಿವೃತ್ತ ಕಾರ್ಮಿಕರಿಗೆ ಕನಿಷ್ಟ ರೂ.3000 ಪಿಂಚಣಿ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಅಸಂಘಟಿತ ಮತ್ತು ಕೃಷಿಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು, ಸರಕಾರಿ ಕ್ಷೇತ್ರದ ಕೈಗಾರಿಕೆಗಳ ಖಾಸಗೀಕರಣ ನಿಲ್ಲಿಸಬೇಕು ,ಬೀಡಿಕಾರ್ಮಿಕರರಿಗೆ ಉದ್ಯೋಗದ ಭದ್ರತೆ ಒದಗಿಸಬೇಕು, ಮುಂತಾದ ಹನ್ನೆರಡು ಅಂಶಗಳ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಯುತ್ತಿದೆ.
ರೈತ ಕಾರ್ಮಿಕರ ಹಿತಾಸಕ್ತಿಯನ್ನು ನಿರ್ಲಕ್ಷಿಸುತ್ತಿರುವ ಕೇಂದ್ರದ ಎನ್ ಡಿ ಎ ಸರಕಾರವು ಮುಕ್ತವಾಗಿ ಈ ದೇಶದ ಬಂಡವಾಳಿಗರ ಪರ ನೀತಿಯನ್ನು ಅನುಸರಿಸುತ್ತಿದೆ ಎಂದು ಸಿಪಿಎಂ ಆರೋಪಿಸಿದೆ.
ಕೇಂದ್ರ ಸರಕಾರವು ಜನ ಸಾಮಾನ್ಯರ ಪರವಾಗಿ ತನ್ನ ಬದ್ದತೆಯನ್ನು ತೋರಿಸಬೇಕೆಂದು ಪಕ್ಷದ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.