UN NETWORKS
ಮುಡಿಪು: ಕೈರಂಗಳದ ಶ್ರೀ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಕೃಷಿ ಉತ್ಸವ ಹಾಗೂ ಕೃಷಿ ಯಂತ್ರೋಪಕರಣಗಳ ಪ್ರದರ್ಶನವು ಡಿ. 29 ಮತ್ತು 30 ರಂದು ನಡೆಯಲಿದ್ದು ಸಕಲ ಸಿದ್ಧತೆ ನಡೆದಿದೆ ಎಂದು ಉತ್ಸವ ಸಮಿತಿ ಸಂಚಾಲಕ ಟಿ.ಜಿ. ರಾಜಾರಾಮ್ ಭಟ್ ಅವರು ಹೇಳಿದರು.
ಸಾವಿರ ಜನರು ಸೇರುವ ನಿರೀಕ್ಷೆ:
ಕೃಷಿ ಉತ್ಸವ ಸಮಿತಿಯ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಮಾತನಾಡಿ, ಈ ಭಾಗದಲ್ಲಿ ಇಂತಹ ಕೃಷಿ ಉತ್ಸವ ನಡೆಯವುದು ಇದೇ ಪ್ರಥಮ. ಈ ಕೃಷಿ ಉತ್ಸವದಲ್ಲಿ ಕೃಷಿಕರು ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿ ಕೃಷಿಯ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಅಲ್ಲದೆ ಈ ಉತ್ಸವದಲ್ಲಿ ಸುಮಾರು 10 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು. ಡಿ.29ರಂದು ಬೆಳಿಗ್ಗೆ 9.30ಕ್ಕೆ ಕೃಷಿ ಉತ್ಸವವನ್ನು ಡಾ.ವಿಷ್ಘೇಶ್ವರ ಭಟ್ ಅವರು ಉದ್ಘಾಟಿಸಿಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಎನ್.ಆರ್.ನಾಗರಾಜ್, ಡಾ.ಎನ್.ಉದಯಕುಮಾರ್, ಡಾ.ವಿಘ್ನೇಶ್ವರ್ ವರ್ಮುಡಿ, ಡಾ.ರವಿ ಭಟ್, ಚಂದ್ರಶೇಖರ ಚೌಟ, ಚಂದ್ರಶೇಖರ, ಮಹೇಶ್ ಚೌಟ, ಸಮೀರ ರಾವ್ ಹಾಗೂ ರವಿಶಂಕರ ಭಟ್ ಭಾಗವಹಿಸಲಿದ್ದಾರೆ. ಡಿ.30ರಂದು ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ದಿವ್ಯರಾಜ್ ಶೆಟ್ಟಿ, ಶಾಲೆಯ ಪ್ರಾಂಶುಪಾಲೆ ದಿವ್ಯದೀಪ, ಶಿಕ್ಷಕ ಶ್ರೀ ಹರಿ ಉಪಸ್ಥಿತರಿದ್ದರು.