UN NETWORKS
ಉಳ್ಳಾಲ: ದ.ಕ. ಜಿಲ್ಲಾ ಗೃಹರಕ್ಷಕದಳದ ವತಿಯಿಂದ ನಡೆದ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟ- 2018 ಸಮಾರೋಪ ಗೃಹರಕ್ಷಕದಳದ ಕಚೇರಿ ಆವರಣದಲ್ಲಿ ನಡೆಯಿತು.
ವಿಕಾಸ್ ಸಮೂಹ ಸಂಸ್ಥೆಯ ಡೀನ್ ಮಂಜುಳಾ ಅನಿಲ್ ರಾವ್, ಕಚೇರಿ ಅಧೀಕ್ಷ ರತ್ನಾಕರ್, ಪ್ರಥಮ ದರ್ಜೆ ಸಹಾಯಕಿ ಅನಿತಾ.ಟಿ.ಎಸ್., ಲಯನ್ಸ್ ಕ್ಲಬ್ ಮಂಗಳೂರು ಕಾರ್ಯದರ್ಶಿ ಹೇಮರಾವ್ ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷೆ ಗೀತಾ, ವಿವಿಧ ಘಟಕಗಳ ಘಟಕಾಧಿರಿಗಳಾದ ಶ್ರೀನಿವಾಸ ಆಚಾರ್ಯ, ದಿನೇಶ್, ಹರೀಶ್ ಆಚಾರ್ಯ, ರಮೇಶ್, ಸಂಜೀವ, ಅಬ್ದುಲ್ ಗಫೂರ್ ಹಾಗೂ ಪಿ. ವಸಂತ ಕುಮಾರ್ ಉಪಸ್ಥಿತರಿದ್ದರು.
ಪಣಂಬೂರು ಘಟಕದ ಪರಮೇಶ್ವರ್ ಅವರು ಪುರುಷರ ವಿಭಾಗದ ವೈಯಕ್ತಿಕ ಚಾಂಪಿಯನ್ ಹಾಗೂ ಬಂಟ್ವಾಳ ಘಟಕದ ಗೀತಾ ಅವರು ಮಹಿಳಾ ವಿಭಾಗದ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದರು. ಜಿಲ್ಲಾ ಗೃಹರಕ್ಷಕದಳದ 35ಮಂದಿ ಗೃಹರಕ್ಷಕರು ಜನವರಿ 6,7,8ರಂದು ನಡೆಯುವ ಪಶ್ಚಿಮ ವಲಯದ ಕ್ರೀಡಾಕೂಟಕ್ಕೆ ಆಯ್ಕೆಯಾದರು. ಡೆಪ್ಯೂಟಿ ಕಮಾಂಡೆಂಟ್ ರಮೇಶ್ ಸ್ವಾಗತಿಸಿದರು. ಸೆಕೆಂಡ್ ಇನ್ ಕಮಾಂಡೆಂಟ್ ಮೊಹಮ್ಮದ್ ಇಸ್ಮಾಯಿಲ್ ವಂದಿಸಿದರು. ರಮೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.