UN NETWORKS
ತಲಪಾಡಿ : ಮಕ್ಕಳು ಬುದ್ಧಿಮತ್ತೆಯಲ್ಲಿ ಬುದ್ಧಿಯಲ್ಲಿ ಮಾತ್ರ ಬೆಳವಣಿಗೆ ಅಲ್ಲ ಆಧುನಿಕ ಶಿಕ್ಷಣದ ಜೊತೆ ಮಕ್ಕಳ ಮಾನಸಿಕ, ದೈಹಿಕವಾಗಿ ಸದೃಡಗೊಳಿಸುವುದರೊಂದಿಗೆ ಅವರಲ್ಲಿ ಉತ್ತಮ ಭಾವನೆ, ಸಂಸ್ಕಾರವನ್ನು ನೀಡುವ ಮೂಲಕ ಸರ್ವಾಂಗೀಣ ಶಿಕ್ಷಣಕ್ಕೆ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಆದ್ಯತೆ ನೀಡುತ್ತಿದ್ದು, ಇದಕ್ಕೆ ಪೂರಕವಾಗಿ ಹೊನಲು ಬೆಳಕಿನ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ ಎಂದು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ.ಪುರಾಣಿಕ್ ಅಭಿಪ್ರಾಯಪಟ್ಟರು.
ಗುಣಮಟ್ಟದ ಶಿಕ್ಷಣ ನೀಡುವ ಉದ್ಧೇಶದಿಂದ ತುಳುನಾಡು ಎಜ್ಯುಕೇಶನಲ್ ಟ್ರಸ್ಟ್ ನಮ್ಮ ಹಿರಿಯರು ಪ್ರಾರಂಬಿಸಿ, ಇತರ ಸಂಸ್ಥೆಗಳಿಗಿಂತ ವಿಭಿನ್ನವಾಗಿ ಬೆಳೆಸಿದ್ದು ಮಂಗಳೂರಿನಲ್ಲಿರುವ ಶಾರದಾ ವಿದ್ಯಾಲಯ, ವಾಮಂಜೂರಿನಲ್ಲಿರುವ ಶುಬೋಧಯ ವಿದ್ಯಾಲಯ, ತಲಪಾಡಿ ದೇವಿನಗರದಲ್ಲಿರುವ ಶಾರದವಿದ್ಯಾನಿಕೇತ , ಪದವಿಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಮೌಲ್ಯಯುತ ಶಿಕ್ಷಣದೊಂದಿಗೆ ಕ್ರೀಡಾ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ವಿಭಾಗ ಸಂಘ ಚಾಲಕ ಡಾ| ವಾಮನ ಶೆಣೈ , ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ, ವಿಧಾನ ಪರಿಷತ್‍ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಂಗಳೂರು ಉತ್ತರ ಶಾಸಕ ಡಾ| ಭರತ್ ಶೆಟ್ಟಿ, ಶಕ್ತಿ ಎಜ್ಯುಕೇಶನಲ್ ಟ್ರಸ್ಟಿನ ಅಧ್ಯಕ್ಷ ಕೆ.ಸಿ. ನಾೈಕ್, ಉದಯವಾಣಿ ಸುದ್ದಿ ವಿಭಾಗ ಮುಖ್ಯಸ್ಥ ಮನೋಹರ ಪ್ರಸಾದ್, ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ| ಯು.ಟಿ. ಇಪ್ತಿಕರ್ ಆಲಿ, ಕರ್ನಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ನಾಗರಾಜ್ ರಾವ್, ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ, ನೀಲ್ ಸೇಲ್ಸ್‍ನ ಸುನೀಲ್ ಆಚಾರ್, ದಂಡತೀರ್ಥ ಪ್ರತಿಷ್ಠಾನ ಉಡುಪಿಯ ಆಡಳಿತ ವಿಶ್ವಸ್ಥರಾದ ಡಾ| ಸೀತಾರಾಮ ಭಟ್, ರಮಣ ಎಂಟರ್‍ಪ್ರೈಸೆಸ್ ಮೈಸೂರಿನ ಆಡಳಿತ ನಿರ್ದೇಶಕ ಎಂ. ಕೃಷ್ಣದಾಸ ಪುರಾಣಿಕ್, ವಿಷ್ಣು ಪ್ರಿಯ ಗ್ರೂಪ್ ಆಫ್ ಎಂಟರ್ ಪ್ರೈಸೆಸ್ ಮೈಸೂರಿನ ಆಡಳಿತ ನಿರ್ದೇಶಕ ಎಂ. ರಘುವೀರ್ ಪುರಾಣಿಕ್, ತುಳುನಾಡು ಎಜ್ಯಕೇಶನ್ ಟ್ರಸ್ಟ್‍ನ ಉಪಾಧ್ಯಕ್ಷ ಕೆ. ಎಸ್ ಕಲ್ಲೂರಾಯ, ಟ್ರಸ್ಟಿ ಪ್ರದೀಪ್ ಕುಮಾರ್ ಕಲ್ಕೂರ, ಶಾರದ ಸಮೂಹ ಸಂಸ್ಥೆಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.