Site icon Ullalavani

ಕರ್ನಾಟಕ ರಕ್ಷಣಾ ವೇದಿಕೆ ಉಳ್ಳಾಲ ಘಟಕದ 5 ಜನರ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟ

UN NETWORKS

ಉಳ್ಳಾಲ: ಕರ್ನಾಟಕ ರಕ್ಷಣಾ ವೇದಿಕೆ ಉಳ್ಳಾಲ ಘಟಕದ ಸಹಯೋಗದೊಂದಿಗೆ ಫಾಲ್ಕೋನ್.ಎಫ್.ಸಿ ಮತ್ತು ಬ್ರದರ್ಸ್ ಕೋಟೆಪುರ ಆಶ್ರಯದಲ್ಲಿ 5 ಜನರ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟವು ಕೋಟೆಪುರ ಟಿಪ್ಪು ಸುಲ್ತಾನ್ ಮೈದಾನದಲ್ಲಿ ನಡೆಯಿತು.

ಕಾರ್ಯ ಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆಯ ದ.ಕ.ಜಿಲ್ಲಾ ಅಧ್ಯಕ್ಷರಾದ ಅನಿಲ್ ದಾಸ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಫಾಲ್ಕೋನ್.ಎಫ್.ಸಿ ಮತ್ತು ಬ್ರದರ್ಸ್ ಕೋಟೆಪುರ ಸಂಘಟನೆಯ ಜವಾಬ್ದಾರಿಯುತ ಕ್ರೀಡಾ ಸ್ಪೂರ್ತಿಯ ಯುವಕರ ತಂಡ ರಕ್ಷಣಾ ವೇದಿಕೆಯೊಂದಿಗೆ ಕೈ ಜೋಡಿಸಿ ನಾವೆಲ್ಲರೂ ಜಾತಿ ಮತ ಧರ್ಮದವರೆಲ್ಲರೂ ಒಂದಾಗಿದ್ದೇವೆ ಎಂಬ ಉತ್ತಮ ಸಂದೇಶ ನೀಡಿದ್ದಾರೆ, ಈ ಸಂದೇಶವು ಮುಂದಿನ ದಿನಗಳಲ್ಲಿ ಇದೇ ಉಳ್ಳಾಲ ಪರಿಸರದಲ್ಲಿ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾಟ ನಡೆಯಬೇಕೆಂಬುದು ನಮ್ಮೆಲ್ಲರ ಅಪೇಕ್ಷೆ ಎಂದು ಅಭಿಪ್ರಾಯ ಪಟ್ಟರು.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾದ ಮದಸೂದನ್ ಗೌಡ, ಉಳ್ಳಾಲ ವಲಯದ ಅಧ್ಯಕ್ಷ ಫೈರೋಜ್, ಪ್ರಧಾನ ಕಾರ್ಯದರ್ಶಿ ಇಫ್ತಿಕಾರ್, ಉದ್ಯಮಿ ಯು.ಹಸೈನಾರ್, ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಕೋಟೆಪುರ, ಕೋಡಿ ಜುಮಾ ಮಸೀದಿ ಅಧ್ಯಕ್ಷ ಹಮೀದ್ ಕೋಡಿ, ಉದ್ಯಮಿ ಫೈರೋಝ್ ಕೋಡಿ, ಸಿದ್ದೀಕ್, ಇಸ್ಮಾಯಿಲ್, ಫಾಲ್ಕೋನ್.ಎಫ್.ಸಿ ಅಧ್ಯಕ್ಷ ಅಸ್ಫಾಕ್, ಕಾರ್ಯದರ್ಶಿ ಅಝ್ವೀಲ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ 19ರ ವಯೋಮಿತಿಯ ರಾಷ್ಟ್ರೀಯ ಫುಟ್ಬಾಲ್ ಟೀಂಗೆ ಕರ್ನಾಕದಿಂದ ಆಯ್ಕೆಯಾದ ಕೋಚ್ ಯು.ಎಮ್ ತಮೀಮ್, ಕ್ಯಾಪ್ಟನ್ ಸಲ್ವಾನ್ ಮೂಸ, ಶಾನವಾಝ್ ಹಮೀದ್,ನಾಝಿಮ್ ಹುಸೈನ್, ಗೋಲ್ ಕೀಪರ್ ಅಲ್ ಶಾಬಾಝ್, ಪಾಝಿಲ್ ಅವರನ್ನು ಸನ್ಮಾನಿಸಲಾಯಿತು.ಕರ್ನಾಟಕ ರಕ್ಷಣಾ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷ ಜಲೀಲ್ ಕಾರ್ಯಕ್ರಮ ನಿರೂಪಿಸಿ ,ಸ್ವಾಗತಿಸಿದರು.

Exit mobile version